ಉಡುಪಿ : ಐಸಿಎಐ ಉಡುಪಿ ಶಾಖೆ (SIRC)ಯು ಐಸಿಎಐನ MSME & Startup Committee ಸಹಯೋಗದಲ್ಲಿ “ಐಸಿಎಐ ಎಂಎಸ್‌ಎಂಇ ಮಹೋತ್ಸವ-2026” ಕಾರ್ಯಕ್ರಮವನ್ನು ಜೂನ್ 27, 2026 ರಂದು ಉಡುಪಿಯ ಐಸಿಎಐ ಭವನದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು, ಅನುದಾನಗಳು, ಹಣಕಾಸು ಪರಿಹಾರಗಳು, ತಂತ್ರಜ್ಞಾನ ಅವಕಾಶಗಳು ಹಾಗೂ ತೆರಿಗೆ ಮತ್ತು ಕಾನೂನು ಅನುಸರಣೆ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ರಮೇಶ್ ವೈದ್ಯ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ. ಎಸ್. ಎಸ್. ನಾಯಕ್ ಹಾಗೂ ಸುಂದರ್ ಎಸ್. ಎಂ. ಅವರು ಎಂಎಸ್‌ಎಂಇಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಶಾಖೆಯ ಅಧ್ಯಕ್ಷರಾದ ಸಿಎ. ಎಂ. ರಾಘವೇಂದ್ರ ಮೊಗೇರಾಯ ಅವರು ಸಭೆಯನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಸಿಎ. ಕೆ. ಲಕ್ಷ್ಮೀಶ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಧ್ಯಕ್ಷರಾದ ಸಿಎ. ಅಶ್ವತ್ ಜೆ. ಶೆಟ್ಟಿ, ಮಾಜಿ ಅಧ್ಯಕ್ಷೆ ಹಾಗೂ ಖಜಾಂಚಿಯಾದ ಸಿಎ. ಅರ್ಚನಾ ಆರ್. ಮೈಯ್ಯ ಮತ್ತು ಸಿಕಾಸಾ ಅಧ್ಯಕ್ಷರಾದ ಸಿಎ. ಸೋನಿತ್ ಎಸ್. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು.

