ಬನ್ನಡ್ಕ ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ :ಭಜಕರ ಸಮ್ಮಿಲನ,ಭಜಕ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಣೆ ಮತ್ತು ಸಾಧನಾ ಪುರಸ್ಕಾರ

0
12

ಮೂಡುಬಿದಿರೆ – ಬನ್ನಡ್ಕದ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯು ಜಿಲ್ಲೆಯಾದ್ಯಂತ ಕುಣಿತ ಭಜನೆಯನ್ನು ಹಮ್ಮಿ ಕೊಳ್ಳುವುದರ ಜೊತೆಗೆ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಭಕ್ತಿ,ವಿನಯತೆ,ವಿಧೇಯತೆ ಮತ್ತು ಸಾತ್ವಿಕತೆಯ ಭಾವನೆಯನ್ನು ಬಿತ್ತುವಂತಹ ವಿವಿಧ ಧಾರ್ಮಿಕ ಚಟುವಟಿಕೆ, ಸಾಂಸ್ಕೃತಿಕ, ಕ್ರೀಡೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಬನ್ನಡ್ಕ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್ (ರಿ) ಅಧ್ಯಕ್ಷರಾದ ಎಂ ದಯಾನಂದ ಪೈಯವರು ನುಡಿದರು.


ಅವರು ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಭಜಕರ ಸ್ನೇಹ ಸಮ್ಮಿಲನ ಮತ್ತು ಪ್ರಸಕ್ತ ಸಾಲಿನ ತಂಡದ ಭಜಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಮತ್ತು ಸಾಧನಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ನಂತರ ಅವರು ಭಜಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.ಇಲ್ಲಿನ ಭಜನಾ ಮಂಡಳಿಯ ಭಜಕ ವಿದ್ಯಾರ್ಥಿಗಳು ಜಿಲ್ಲೆಯ ಇತರ ಕಡೆಗಳಲ್ಲಿ ನಡೆಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಅವರುಗಳ ಹೆಮ್ಮೆಯ ಸಾಧನೆಯನ್ನು ಪೈಯವರು ಕೊಂಡಾಡಿದರಲ್ಲದೆ ಇದರ ಹಿಂದಿನ ಪ್ರೇರಣಾ ಶಕ್ತಿ ತರಬೇತುದಾರ ಮತ್ತು ಭಜನಾ ಮಂಡಳಿಯ ತರಬೇತುದಾರ ಮತ್ತು ಸಂಘಟಕರಾದ ಸತೀಶ್ ಪೂಜಾರಿಯವರ ನಿಸ್ವಾರ್ಥ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಬೆಳಿಗ್ಗೆ ಭಜಕ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಕ್ರೀಡಾ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮಗಳನ್ನು ದಯಾನಂದ ಪೈಯವರು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಬನ್ನಡ್ಕ ದ ಆಡಳಿತ ಮೊಕ್ತೇಸರರಾದ ಸುಕುಮಾರ್ ಬಲ್ಲಾಳ್,ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಾಸುದೇವ ಭಟ್, ಅಡ್ವೋಕೇಟ್ ರೂಪ ಬಲ್ಲಾಳ್ ಮಾರ್ನಾಡ್, ಮೆಟಾ ಸಾಫ್ಟ್ ಐಟಿ ಸೊಲ್ಯುಶನ್ ನ ನಿರ್ದೇಶಕಿ ಶ್ರೀಮತಿ ಸರಿತಾ ಪೂಜಾರಿ, ಉದ್ಯಮಿಗಳಾದ ನಿತೀಶ್ ಕೋಟ್ಯಾನ್ ಮತ್ತು ಸೂರಜ್ ಜೈನ್ ಮಾರ್ನಾಡು,ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್,ಉಪಾಧ್ಯಕ್ಷ ದಿನೇಶ್ ಆಚಾರ್ಯ,ಶಶಿಧರ ಉಜಿರೆ, ಭಜನಾ ತರಬೇತುದಾರರಾದ ವಿಜಯ್ ನೀರ್ಕೆರೆ,ಪ್ರವೀಣ್ ಬೆಳುವಾಯಿ,ಸೌಮ್ಯ ಪೂಜಾರಿ ,ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಭವ್ಯ ಸತೀಶ್ ಕೋಟ್ಯಾನ್ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಂಚಾಲಕರಾದ ಸತೀಶ್ ಪೂಜಾರಿಯವರು ಭಜನಾ ಮಂಡಳಿಯು ನಡೆದು ಬಂದ ದಾರಿ ,ದಾನಿಗಳ ಕೊಡುಗೆ ಸ್ಮರಿಸಿ ಮುಂದಿನ ರೂಪು ರೇಷೆಗಳ ಬಗ್ಗೆ ಮಾತನಾಡಿದರು .
ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ರಿತಿ,ಖುಷಿ, ಮತ್ತು ಕೃತಿ ಇವರನ್ನು ರೇಷ್ಮೆ ಶಾಲು ಹೊದಿಸಿ,ಫಲ ಪುಷ್ಪ ಹಾರ,ಸನ್ಮಾನ ಪತ್ರ ಮತ್ತು ಸ್ಮರಣಿಕೆಗಳನ್ನಿತ್ತು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಭಜಕ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು .
ಪ್ರಾರಂಭದಲ್ಲಿ ರಿತಿ,ಶ್ರೇಯಾ,ವಂಶಿ,ಪ್ರತೀಕ್ಷಾ,ಕೃತಿ ಪ್ರಾರ್ಥನೆ ಹಾಡಿದರು .ಸನ್ಮಾನ ಪತ್ರವನ್ನು ಕೃಪಾ ಮತ್ತು ಲಹರಿ ವಾಚಿಸಿದರು . ಉಷಾಕಿರಣ ಸ್ವಾಗತಿಸಿದರು.ಕೌಶಿಕ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here