ಕುಶಾಲನಗರ: ಕರವೇ ಸ್ವಾಭಿಮಾನಿ ಬಣಕ್ಕೆ ಮಾಜಿ ಯೋಧರು ಸೇರಿದಂತೆ ನಾಲ್ವರು ಅಧಿಕೃತ ಸೇರ್ಪಡೆ

0
19

ಸರ್ಕಾರಿ ಅತಿಥಿಗೃಹದಲ್ಲಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕ್ರಮದಲ್ಲಿ ನಾಸಿರ್, ರವಿಕಿರಣ್ ಹಾಗೂ ಮಾಜಿ ಯೋಧರಾದ ದಿನೇಶ್, ರವೀಂದ್ರ ಕರವೇ ಸ್ವಾಭಿಮಾನಿ ಬಣಕ್ಕೆ ಅಧಿಕೃತ ಸೇರ್ಪಡೆ

ಕುಶಾಲನಗರ : ಸ್ಥಳೀಯ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪ್ರಮುಖ ಮುಖಂಡರು ಹಾಗೂ ಮಾಜಿ ಯೋಧರು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಬಣವನ್ನು ಅಧಿಕೃತವಾಗಿ ಸೇರಿಕೊಂಡರು.

ಬೆಳಿಗ್ಗೆ 10 ಗಂಟೆಗೆ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ನಾಸಿರ್, ರವಿ ಕಿರಣ್ ಎಸ್.ಜೆ., ಕೆ.ಜಿ. ದಿನೇಶ್ (ಮಾಜಿ ಯೋಧರು) ಹಾಗೂ ರವೀಂದ್ರ ಬಿ.ಎಂ. (ಮಾಜಿ ಯೋಧರು) ಸಂಘಟನೆಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೌಡ, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಶಿವಣ್ಣ, ತಾಲ್ಲೂಕು ಮುಖಂಡ ನಂಜಪ್ಪ, ತಾಲ್ಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷ ಮಣಿಕಂಠ, ತಾಲ್ಲೂಕು ಮುಖಂಡ ಕಾರ್ತಿಕ್ ಹಾಗೂ ಕುಶಾಲನಗರ ತಾಲ್ಲೂಕು ಸಂಘಟನಾಕಾರ ಚಂದ್ರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೇರ್ಪಡೆಗೊಂಡ ನೂತನ ಸದಸ್ಯರನ್ನು ಸಂಘಟನೆಯ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ದೇಶ ಸೇವೆ ಸಲ್ಲಿಸಿದ ಮಾಜಿ ಯೋಧರು ಹಾಗೂ ಸ್ಥಳೀಯ ಮುಖಂಡರು ಕರವೇ ಸ್ವಾಭಿಮಾನಿ ಬಣವನ್ನು ಸೇರ್ಪಡೆಯಾಗಿರುವುದು ಸಂಘಟನೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಪದಾಧಿಕಾರಿಗಳು ಅಭಿಪ್ರಾಯಪಟ್ಟರು.

ಕನ್ನಡ ನಾಡು, ನುಡಿ, ಜಲ ಹಾಗೂ ಗಡಿ ರಕ್ಷಣೆಯ ಹೋರಾಟಗಳಲ್ಲಿ ನೂತನ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದು, ಸಂಘಟನೆಯ ಉದ್ದೇಶಗಳು ಮತ್ತು ಹೋರಾಟಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಸಂಘಟನೆಯ ನಿಯಮಾವಳಿಗಳ ಅನ್ವಯ ನೂತನ ಸದಸ್ಯರಿಗೆ ಸ್ವಾಗತ ಕೋರಿ ಶುಭ ಹಾರೈಸಲಾಯಿತು.

LEAVE A REPLY

Please enter your comment!
Please enter your name here