ಬೆಳಾಲು; ನೋಂಪು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0
102

ಬೆಳ್ತಂಗಡಿ: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇಲ್ಲಿ ದಿನಾಂಕ 6ನೇ ಸೆಪ್ಟೆಂಬರ್ ಶನಿವಾರದಂದು ನಡೆಯುವ ಅನಂತ ಚತುರ್ದಶಿ ನೋಂಪು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಆಡಳಿತ ಮೊಕ್ತೇಸರರಾದ ಜೀವಂದರ್ ಕುಮಾರ್ ಜೈನ್ ಬೆಳಾಲುಗುತ್ತು, ಅಸ್ರಣ್ಣರು ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಶ್ರೀನಿವಾಸ್ ಗೌಡ ವಕೀಲರು, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಮಹಿಳಾ ಸಮಿತಿಯ ಅಧ್ಯಕ್ಷರು ಹೇಮಲತಾ ಶ್ರೀನಿವಾಸ್ ಗೌಡ ಗಣಪನಗುತ್ತು, ಗೌರವಾಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಸಮಿತಿಯ ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಲೆಕ್ಕಪರಿಶೋಧಕರಾದ ನಾರಾಯಣಗೌಡ ಎಳ್ಳುಗದ್ದೆ ,ಪ್ರಧಾನ ಅರ್ಚಕರಾದ ಸಂಪತ್ ಕುಮಾರ್, ಭೈಲುವಾರು ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು. ದೇವಸ್ಥಾನದ ಮ್ಯಾನೇಜರ್ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here