ಬೆಳ್ವೆ:ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಖ್ ಅಬ್ದುಲ್ ಝಾಹಿದ್ ಗೆ ಸನ್ಮಾನ

0
43

ಇಸ್ಲಾಮಿಕ್ ಯೂತ್ ಫೆಡರೇಶನ್ ಬೆಳ್ವೆ ಇದರ ವತಿಯಿಂದ 2025-26 ನೇ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ ನಿವಾಸಿ “ಶೇಖ್ ಅಬ್ದುಲ್ ಝಾಹಿದ್” ರವರಿಗೆ ಶುಕ್ರವಾರ ಜುಮ್ಮಾ ನಮಾಝಿನ ನಂತರ ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಇಸ್ಲಾಮಿಕ್ ಯೂತ್ ಫೆಡರೇಶನ್ ಬೆಳ್ವೆ ಅಧ್ಯಕ್ಷ ಮೊಹಮ್ಮದ್ ನಝೀರ್ ಅಲ್ಬಾಡಿ ವಹಿಸಿದರು. ಜುಮ್ಮಾ ಮಸೀದಿ ಬೆಳ್ವೆ ಇದರ ಅಧ್ಯಕ್ಷ ಅಹಮದ್ ಬ್ಯಾರಿ, ಹಿದಾಯತುಲ್ ಉಲೂಮ್ ಮದ್ರಸ ಕಮಿಟಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ , ಜುಮ್ಮಾ ಮಸೀದಿ ಬೆಳ್ವೆ ಕಮಿಟಿ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ ಬೆಳ್ವೆ , ಕಾರ್ಯದರ್ಶಿ ಶಕೀಲ್ ಅಹಮದ್ ಬೆಳ್ವೆ , ಕೋಶಾಧಿಕಾರಿ ಮೊಹಮ್ಮದ್ ಅನ್ಸಾರ್, ಜೊತೆ ಕಾರ್ಯದರ್ಶಿ ಇಕ್ಬಾಲ್, ಮಾಜಿ ಅಧ್ಯಕ್ಷ ಶಬ್ಬೀರ್ ಸಾಹೇಬ್, ಹಿರಿಯರಾದ ಗೌಸ್ ಸಾಹೇಬ್ ಬೆಳ್ವೆ ಉಪಸ್ಥಿತರಿದ್ದರು ಜುಮ್ಮಾ ಮಸೀದಿ ಬೆಳ್ವೆ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿ ಶುಭ ಹಾರೈಸಿದರು. ಮೊಹಮ್ಮದ್ ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬೆಳ್ವೆ ಜಮಾತ್ ಭಾಂದವರು ಹಾಗೂ ಇಸ್ಲಾಮಿಕ್ ಯೂತ್ ಫೆಡರೇಷನ್ ಸದಸ್ಯರುಗಳು ಉಪಸ್ಥಿರಿದ್ದರು

LEAVE A REPLY

Please enter your comment!
Please enter your name here