ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸದ ವಿದ್ಯಾರ್ಥಿಗಳಿಗೆ ಕುರಾನ್ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಅಧ್ಯಕ್ಷತೆಯನ್ನು ಹಿದಾಯತುಲ್ ಉಲೂಮ್ ಅರಬಿ ಮದ್ರಸ ಸದರ್ ಮೂಅಲಿಂ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ವಹಿಸಿದರು.
ಮುಖ್ಯ ತಿಥಿಗಳಾಗಿ ಹಿದಾಯತುಲ್ ಉಲೂಮ್ ಅರಬಿ ಮದ್ರಸ ಕಮಿಟಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ಉಪಾಧ್ಯಕ್ಷ ಅಬ್ದುಲ್ಲಾ ಸಾಹೇಬ್ , ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ ಜುಮ್ಮಾ ಮಸೀದಿ ಬೆಳ್ವೆ ಇದರ ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಸದಸ್ಯ ಜಾಸಿಂ, ಬೆಳ್ವೆ ಯೂತ್ ಫೆಡರೇಷನ್ ಅಧ್ಯಕ್ಷ ಮೊಹಮ್ಮದ್ ನಝೀರ್ , ಅನ್ವರ್ ಹುಸೈನ್, ಅಬ್ದುಲ್ ಖಾದರ್ ,ರಝಾಕ್ ಅಲ್ಬಾಡಿ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಅರಾಫತ್ ಅಲ್ಬಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು, ವಿದ್ಯಾರ್ಥಿ ಅನಸ್ ಕಿರಾತ್ ಪಠಿಸಿದರು.ಮೊಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಮೌಲಾನಾ ಮೊಹಮ್ಮದ್ ರಫೀಕ್ ದುವಾಗೈದರು.

