ಬೆಳ್ತಂಗಡಿ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು

0
32

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಪರ್ಕ ಸುಗಮಗೊಳಿಸಲು ಹಲವು ಸ್ಥಳಗಳಲ್ಲಿ ಕಾಲುಸಂಕ‌ ನಿರ್ಮಾಣಕ್ಕೆ ಸರ್ಕಾರದಿಂದ ರೂ.1.00 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಈ ಕುರಿತಂತೆ ಶಾಸಕರಾದ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಸರಕಾರದಿಂದ ಒಟ್ಟು ನಾಲ್ಕು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ, ಪ್ರತಿ ಕಾಮಗಾರಿಯ ವೆಚ್ಚ ತಲಾ ರೂ.25.00 ಲಕ್ಷ. ಅನುಮೋದನೆ ಪಡೆದ ಕಾಮಗಾರಿಗಳ ವಿವರಗಳು ಹೀಗಿವೆ:

1. ಮಲವಂತಿಗೆ ಗ್ರಾಮದ ಕುಮೇರು ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯಲ್ಲಿ ಕಾಲುಸಂಕ

2.ನೆರಿಯ ಗ್ರಾಮದ ಪುಲ್ಲಾಜೆ ಪ್ರದೇಶದಲ್ಲಿ ಕಾಲುಸಂಕ

3.ಸವಣಾಲು ಗ್ರಾಮದ ಕೋಡಿಮುಗೇರು ಪ್ರದೇಶದಲ್ಲಿ ಕಾಲುಸಂಕ

4.ಕುಕ್ಕೇಡಿ ಗ್ರಾಮದ ಕಾಜಾಲ ಪ್ರದೇಶದಲ್ಲಿ ಕಾಲುಸಂಕ

    ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು , ಮತ್ತು ಸಾರ್ವಜನಿಕರ ಸಂಚಾರಕ್ಕೆ ಕಲ್ಪಿಸಲಾಗುವುದು. ಶಾಸಕರು ಈ ಮಹತ್ವದ ಕಾರ್ಯಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    LEAVE A REPLY

    Please enter your comment!
    Please enter your name here