ಭದ್ರಗಿರಿ : ಪುರುಷೋತ್ತಮ ಮಾಸ ವಿಶೇಷ ಭಜನಾ ಮಹೋತ್ಸವ ಪ್ರಾರಂಭ

0
7

ಭದ್ರಗಿರಿ ಶ್ರೀ ವೀರವಿಠ್ಠಲ ದೇವರ ಸನ್ನಿಧಿಯಲ್ಲಿ   ವಿಶೇಷ ಭಜನಾ ಮಹೋತ್ಸವ ತಾ 17-05-26 ರಿಂದ 15-06-26 ತನಕ ಬರುವ ಅಧಿಕ ಜ್ಯೇಷ್ಠ ಮಾಸವನ್ನು ಆಚರಿಸಲಾಗುವುದು.

ಈ ಪ್ರಯುಕ್ತ  ಭದ್ರಗಿರಿಯ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಅಧಿಕಮಾಸದಲ್ಲಿ ಪ್ರತೀ ದಿನಸಂಜೆ 4.00 ರಿಂದ 6.00 ರ ತನಕ ವಿವಿಧ  ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ .

ಈ ಪುರುಷೋತ್ತಮ ಮಾಸ ಭಜನಾ ಮಹೋತ್ಸವದ ಶುಭಾರಂಭವನ್ನು ದೇವತಾ ಪ್ರಾರ್ಥನೆ, ದೀಪಪ್ರಜ್ವಲನ ಮತ್ತು ಮೊದಲ ದಿನದ ಭಜನಾ ಕಾರ್ಯಕ್ರಮವನ್ನು ಭದ್ರಗಿರಿ ಶ್ರೀ ವೀರವಿಠ್ಠಲ ಭಜನಾ ಮಂಡಳಿಯಿಂದ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿಆಡಳಿತ ಮೊಕ್ತೇಸರ ಮತ್ತು ಸೇವಾದಾರರಾದ ಭದ್ರಗಿರಿ ಪಾಂಡುರಂಗ ಆಚಾರ್ಯ , ಅರ್ಚಕರಾದ ಸದಾನಂದ ಆಚಾರ್ಯ,  ವಿಶ್ವಸ್ತ ಮಂಡಳಿಯ ಸದಸ್ಯರಾದ  ಕೆ ಸಿ ಪ್ರಭು, ಗಣೇಶ ಪೈ ,ಕೆ.ಪಾಂಡುರಂಗ ಕಿಣಿ, ಗಿರಿಧರ ರಾವ್,  ಸುರೇಶ ಶೆಣೈ‌ ,ಭಾಸ್ಕರ ಶೆಣೈ , ಸಿ.ಕೃಷ್ಣ ಪೈ ,ಸಿ ರತ್ನಾಕರ ಪೈ ,ದೇವದಾಸ ನಾಯಕ್ , ರಾಧಾ ಕಾಮತ್ ಮತ್ತಿತರ ಭಕ್ತಾದಿಗಳು ಭಾಗವಹಿಸಿದ್ದರು .

ತಾ.15-06-26 ರಂದು ಮಂಗಲೋತ್ಸವ ನಡಯಲಿದೆ. ಒಂದು ತಿಂಗಳು ನಡೆಯಲಿರುವ ಈ ಭಜನಾ ಮಹೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ ಶ್ರೀ ವೀರವಿಠ್ಠಲ ದೇವರ ಕೃಪೆಗೆ ಪಾತ್ರರಾಗ ಬೇಕೆಂದು ಶ್ರೀ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here