ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಇದರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ತಾಲೂಕು ಪದಾಧಿಕಾರಿಗಳ ಹಾಗೂ ಎಲ್ಲಾ ವಲಯ ಮಟ್ಟದ ಪದಾಧಿಕಾರಿಗಳ ಸಭೆಯು ಉಜಿರೆಯ ಸಿರಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ರವಿ ಚಾರ್ಮಾಡಿ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾಗಿರುವ ವೆಂಕಟೇಶ್ ಭಟ್ ಕಜೆ, ತಾಲೂಕು ಭಜನಾ ಪರಿಷತ್ತಿನ ಸಂಚಾಲಕರು ಹಾಗೂ ಯೋಜನಾಧಿಕಾರಿಗಳಾಗಿರುವ ಯಶೋಧರ, ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಇಂದಬೆಟ್ಟು ಇವರುಗಳು ಆಗಮಿಸಿದ್ದರು.

ಪ್ರತಿಮಾ ಕೊಕ್ಕಡ ಇವರ ಪ್ರಾರ್ಥನೆ ನಂತರ ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾದ ವೆಂಕಟೇಶ ಭಟ್ ಕಜೆ ಇವರು ಎಲ್ಲಾ ಅತಿಥಿಗಳನ್ನು ಸೇರಿಕೊಂಡು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಗೌಡ ರವರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಂತಹ ಕಾರ್ಯಕ್ರಮಗಳ ವರದಿ ಯಾಚಿಸಿದರು.
ರಾಜ್ಯಾಧ್ಯಕ್ಷರಾಗಿರುವ ಪಿ. ಚಂದ್ರಶೇಖರ್ ಸಾಲ್ಯಾನ್ ರವರು ಸಭೆಯ ಅಜೆಂಡವನ್ನು ತಿಳಿಸಿ ನಮ್ಮ ತಾಲೂಕಿಗೆ ಸಂಬಂಧಪಟ್ಟ ವಲಯಗಳಲ್ಲಿರುವ ಭಜನಾ ಮಂಡಳಿಗಳ ನೂನ್ಯತೆಗಳನ್ನು ಒಂದೊಂದು ವಲಯದ ಪದಾಧಿಕಾರಿಗಳಿಂದ ತಿಳಿದು ಅದಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವಲಯದ ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ವಲಯದಲ್ಲಿರುವ ಭಜನಾ ಮಂಡಳಿಗಳಿಗೆ ಭೇಟಿ ನೀಡುವ ಪ್ರಾಮುಖ್ಯತೆಯನ್ನು ತಿಳಿಸುತ್ತಾ ವಲಯದಲ್ಲಿ ಸಕ್ರಿಯವಾಗಿ ಕೆಲಸ ಮಾಡದೆ ಇರುವ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಿದರು. ಹಾಗೂ ಮುಂದಿನ ತಾಲೂಕು ಮಟ್ಟದ ಸಭೆ ನಡೆಯುವ ಸಂದರ್ಭದಲ್ಲಿ ಈ ಹಿಂದೆ ತಾಲೂಕು ಭಜನಾ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಸಭೆಗೆ ಆಮಂತ್ರಿಸುವಂತೆ ತಾಲೂಕು ಸಮಿತಿಗೆ ಸೂಚಿಸಿದರು.
ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಪಿ ಅಳಿಯೂರು ಮಾತನಾಡಿ ಇನ್ನಷ್ಟು ಒಗ್ಗಟ್ಟಿನಿಂದ ಸಂಘಟನೆಯನ್ನು ಬೆಳೆಸಬೇಕು ಹಾಗೂ ಆರೋಗ್ಯಕರ ಚರ್ಚೆಯೊಂದಿಗೆ ಉತ್ತಮವಾಗಿ ಭಜನಾ ಪರಿಷತ್ ನ ಸಭೆಯು ನಡೆಯುತ್ತಿದ್ದು ಅಭಿನಂದನರ್ಹ ಎಂದು ಅಭಿಪ್ರಾಯಪಟ್ಟರು. ನಂತರ ಸಪ್ಟೆಂಬರ್ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಕಮ್ಮಟ ಭಜನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಪ್ರತಿ ಭಜನಾ ಮಂಡಳಿಗಳಿಂದ ಕನಿಷ್ಠ ಇಬ್ಬರು ಸದಸ್ಯರು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಿದರು.
ಪರಿಷತ್ತಿನ ತಾಲೂಕು ಸಂಚಾಲಕರು ಹಾಗೂ ಯೋಜನಾಧಿಕಾರಿಗಳಾಗಿರುವ ಯಶೋಧರ್ ರವರು ಮಾತನಾಡಿ ಭಜನೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆಯುತ್ತಿರುವ ಅನೇಕ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗಿದೆ, ಮಾದರಿ ಸಭೆಯನ್ನು ಆಯೋಜಿಸಿ ಸಮಸ್ಯೆಗಳು ಬಂದಾಗ ನಮ್ಮೊಳಗೆ ಪರಿಹರಿಸಿ ಸರಿದೂಗಿಸಿಕೊಂಡು ಮುನ್ನಡೆಯಬೇಕು ಹಾಗೂ ಭಜನಾ ಪರಿಷತ್ತು ತಾಲೂಕಿನಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಭಜನಾ ಪರಿಷತ್ತಿನ ಸಲಹೆಗಾರರಾದ ನಾಗೇಶ್ ಬಿ ನೆರಿಯ ಸೇರಿರುವ ಎಲ್ಲರಿಗೂ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿಯ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

