ನವರಾತ್ರಿಯಂದು ದುರ್ಗಾಪರಮೇಶ್ವರಿ ಭಜನಾ ಮಂದಿರ ಸುದೆಂಬಳದಲ್ಲಿ ಭಜನೋತ್ಸವ ಕಾರ್ಯಕ್ರಮ

0
14

ಬಾಯಾರು : ದುರ್ಗಾಪರಮೇಶ್ವರಿ ಭಜನಾ ಮಂದಿರ ಸುದೆಂಬಳ ಬಾಯಾರು ಇಲ್ಲಿ ನವರಾತ್ರಿ ಉತ್ಸವವು 9 ದಿನಗಳವರೆಗೆ ನಡೆಯಲಿದ್ದು,11/10/2026 ರಿಂದ 19/10/2026 ರವರೆಗೆ ಪ್ರತಿದಿನ ಸಂಜೆ 8:30 ರಿಂದ ವಿಶೇಷ ಭಜನಾ ಸೇವಾ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿಯ ಕೊನೆಯ ದಿನ 19/10/2026 ಸೋಮವಾರ ಸಂಜೆ 7 ರಿಂದ ದುರ್ಗಾಪರಮೇಶ್ವರಿ ಭಜನಾ ತಂಡ ಸುದೆಂಬಳ ಇವರಿಂದ ಕುಣಿತ ಭಜನೆ ಹಾಗೂ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.

ನವರಾತ್ರಿಯ ಕೊನೆಯದಿನವಾದ 20/10/2026ರಂದು ಆಯುಧ ಪೂಜೆಯ ಪ್ರಯುಕ್ತ ವಾಹನ ಪೂಜೆ ನೇರವೇರಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡು ಶ್ರೀ ದೇವಿಗೆ ವಿಶೇಷ ಭಜನಾ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿ, ತನು – ಮನ ಧನಗಳಿಂದ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದುರ್ಗಾಪರಮೇಶ್ವರಿ ಭಜನಾ ಮಂದಿರ ಸುದೆಂಬಳ ಬಾಯಾರು ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.