ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೆಟ್ಲಮುಡ್ನೂರು ಗ್ರಾಮದ ಬಿಲ್ಲವ ಗ್ರಾಮ ಸಮಿತಿ ಸಭೆ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0
8

ಕಲ್ಲಡ್ಕ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೆಟ್ಲಮುಡ್ನೂರು ಗ್ರಾಮದ ಬಿಲ್ಲವ ಗ್ರಾಮ ಸಮಿತಿಯ ಕಾರ್ಯಕಾರಿ ಸಭೆಯು ಸೋಮಪ್ಪ ಪೂಜಾರಿ ಮಾದೇಲು ಇವರ ಮನೆಯಲ್ಲಿ ಮೇ 27ನೇ ಬುಧವಾರ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀಧರ್ ಪೂಜಾರಿ ಮುಜಲ ವಹಿಸಿದ್ದರು.

ಈ ಸಂದರ್ಭದಲ್ಲಿ ರಮೇಶ್ ಪೂಜಾರಿ ಮೆಸ್ಕಾಂ ಹಾಗೂ ಡಾ. ತ್ರಿವೇಣಿ ರಮೇಶ್ ದಂಪತಿಗಳ ಸುಪುತ್ರಿ ಪ್ರಗತಿ ಆರ್ ಸಾಲ್ಯಾನ್, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 615 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 10ನೇ ರ‍್ಯಾಂಕ್ ಗಳಿಸಿದ ಸಾಧನೆಗಾಗಿ ಹಾಗೂ ನಡು ಉರ್ದಿಲ ಜನಾರ್ದನ ಪೂಜಾರಿ ಮತ್ತು ಅಶ್ವಿತಾ ದಂಪತಿಗಳ ಸುಪುತ್ರಿ ಆರಾಧ್ಯ ಜನಾರ್ಧನ ಪೂಜಾರಿ ಅವರು ಒಡಿಸ್ಸಿ ನೃತ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಬಿಲ್ಲವ ಸಮಾಜದ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here