ಗುರುವಾಯನಕೆರೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಯಶಸ್ವಿ

0
12

ಗುರುವಾಯನಕೆರೆ: ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ.) ಗುರುವಾಯನಕೆರೆ ಹಾಗೂ ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘ ಪುತ್ತೂರು ಇವರ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವು ಕುಲಾಲ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಸೋಮಯ ಹನೈನಡೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘ ಪುತ್ತೂರಿನ ಅಧ್ಯಕ್ಷರಾದ ಭಾಸ್ಕರ್ ಎಂ. ಪೆರುವಾಯಿ ಭಾಗವಹಿಸಿದರು.

ಅತಿಥಿಗಳಾಗಿ ದಾಮೋದರ ಕುಲಾಲ್ (ಉಪಾಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘ), ಜನಾರ್ಧನ ಮೂಲ್ಯ (ಮುಖ್ಯ ಕಾರ್ಯನಿರ್ವಹಣಾಧಿಕಾರಿ), ಪದ್ಮಕುಮಾರ್ ಹಾಗೂ ಗಣೇಶ್ ಕುಲಾಲ್ (ನಿರ್ದೇಶಕರುಗಳು) ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಧೀರ್ ಕೆ.ಎನ್. ನಿರೂಪಿಸಿದರು. ದಿನೇಶ್ ಮಾಲಾಡಿ ಸ್ವಾಗತಿಸಿದರು. ಸಂದೇಶ್ ಕುಮಾರ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳ ವಿವರ ವಾಚನವನ್ನು ಸದಾನಂದ ಕುಲಾಲ್ ನೆರವೇರಿಸಿದರು.

ಅಧ್ಯಕ್ಷರಾದ ಸೋಮಯ ಹನೈನಡೆ ಮಾತನಾಡಿ, ಸಮಾಜದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು. ಜೊತೆಗೆ ತಂದೆ-ತಾಯಿ ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಕುಂಬಾರರ ಗುಡಿ ಕೈಗಾರಿಕ ಸಹಕಾರಿ ಸಂಘವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಕಾರವನ್ನು ಪ್ರಶಂಸಿಸಿದ ಅವರು, ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಭಾಸ್ಕರ್ ಎಂ. ಪೆರುವಾಯಿ ಅವರು, ಸಮಾಜದವರು ಸಹಕಾರಿ ಸಂಘ ನೀಡುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹ, ಹಿರಿಯ ನಾಗರಿಕರಿಗೆ ತುರ್ತು ಧನ ಸಹಾಯ ಹಾಗೂ ಠೇವಣಿದಾರರಿಗೆ ಆಕರ್ಷಕ ಬಡ್ಡಿದರದ ಸೌಲಭ್ಯಗಳನ್ನು ಸಂಘ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕು ಸಂಘದ ವತಿಯಿಂದ ನಡೆಯಲಿರುವ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ ಮೂಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಮಾಶಾಸನ ನೀಡುವ ಯೋಜನೆಯನ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು. ಜೊತೆಗೆ ಸದಸ್ಯರು ಹಾಗೂ ಸಾರ್ವಜನಿಕರಿಗೆ ಸಂಘದಿಂದ ದೊರೆಯುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

LEAVE A REPLY

Please enter your comment!
Please enter your name here