ಹೆಚ್‌ಡಿಎಫ್‌ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ ಸಿಡಿಎಂ ಸೌಲಭ್ಯ ಆರಂಭ

0
7

ಬೆಳ್ತಂಗಡಿ : ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ CDM – Cash Deposit Machine ಸೌಲಭ್ಯವನ್ನು ಆರಂಭಿಸಲಾಗಿದೆ.

ಇನ್ನು ಮುಂದೆ ಹೆಚ್‌ಡಿಎಫ್‌ಸಿ ಬ್ಯಾಂಕಿನ ಗ್ರಾಹಕರು ಯಾವುದೇ ಸಮಯದಲ್ಲಿ ನಗದು ಠೇವಣಿ ಮಾಡಿಕೊಳ್ಳಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಈ ಹೊಸ ಸೇವೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ.

ಈ ಚಾಲನೆಯನ್ನು ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲೀಕರಾದ ಪ್ರಮೋದ್ ಆರ್. ನಾಯಕ್ ಹಾಗೂ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕರಾದ ಸಂತೋಷ್ ಮೂಲ್ಯ ಅವರು ಜಂಟಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಸಿಬ್ಬಂದಿಗಳಾದ ವಿನಾಯಕ್ ಎನ್.ಜೆ, ಪ್ರದೀಪ್ ಶೆಟ್ಟಿ ಎಸ್, ಅಕ್ಷತಾ ಪಿ ಹಾಗೂ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

ವ್ಯವಸ್ಥಾಪಕರಾದ ಸಂತೋಷ್ ಮೂಲ್ಯ ಅವರು ಸಿಡಿಎಂನ ಪ್ರಯೋಜನಗಳು ಹಾಗೂ ಅದನ್ನು ಬಳಸುವ ವಿಧಾನದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here