ಮೂಡುಬಿದಿರೆ : ದೀಪಾವಳಿ ಪ್ರಯುಕ್ತ ನ.8ರಂದು 9ನೇ ವರ್ಷದ ‘ಯೋಧ ನಮನ’ ಕಾರ್ಯಕ್ರಮ

0
12

ಮೂಡುಬಿದಿರೆ : ಬೆದ್ರ ಸೇವಾ ಪ್ರತಿಷ್ಠಾನ (ರಿ.), ಇದರ ಯುವ ಘಟಕ ಜವನೆರ್ ಬೆದ್ರ ಹಾಗೂ ಮಹಿಳಾ ಘಟಕ ಅಬ್ಬಕ್ಕ ಬ್ರಿಗೇಡ್ ಸಹಯೋಗದಲ್ಲಿ ದೀಪಾವಳಿ ಪ್ರಯುಕ್ತ 9ನೇ ವರ್ಷದ ‘ಯೋಧ ನಮನ’ ಕಾರ್ಯಕ್ರಮವು ನವೆಂಬರ್ 8ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಸೇವೆ, ತ್ಯಾಗ ಹಾಗೂ ಸಮರ್ಪಣಾ ಮನೋಭಾವದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಬಾರಿಯ ‘ಯೋಧ ನಮನ’ ಗೌರವಕ್ಕೆ ನಿವೃತ್ತ ಸೈನಿಕ, ಹವಾಲ್ದಾರ್ ಶ್ರೀ ನವಾನಂದ ಅವರು ಭಾಜನರಾಗಲಿದ್ದಾರೆ. ದೇಶದ ಭದ್ರತೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿದ ಯೋಧರ ಸೇವೆಯನ್ನು ಸ್ಮರಿಸಿ, ಅವರ ತ್ಯಾಗ ಮತ್ತು ದೇಶಪ್ರೇಮಕ್ಕೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಯೋಧ ನಮನ ಕಾರ್ಯಕ್ರಮವನ್ನು ಈ ಹಿಂದೆ ಸಮಾಜ ಮಂದಿರದಲ್ಲಿ ಆಯೋಜಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಸ್ಥಳ ಬದಲಾವಣೆ ಮಾಡಲಾಗಿದ್ದು, ಗೌರವಾನ್ವಿತ ಯೋಧ ಶ್ರೀ ನವಾನಂದ ಅವರ ಸ್ವಗೃಹವಾದ **ನಂದಾದೀಪ, ಒಂಟಿಕಟ್ಟೆ ರೋಡ್, ವಿ.ಆರ್. ಇಂಟೀರಿಯರ್ ಹತ್ತಿರ, ಒಂಟಿಕಟ್ಟೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ದೇಶದ ಹೆಮ್ಮೆಯ ವೀರ ಯೋಧನಿಗೆ ಗೌರವದ ನಮನ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಯೋಧರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವಂತೆ ಬೆದ್ರ ಸೇವಾ ಪ್ರತಿಷ್ಠಾನ, ಜವನೆರ್ ಬೆದ್ರ ಹಾಗೂ ಅಬ್ಬಕ್ಕ ಬ್ರಿಗೇಡ್ ವತಿಯಿಂದ ವಿನಂತಿಸಲಾಗಿದೆ.