ತಂದೆಯಾದವನು ಮಗನಿಗೆ ಬುದ್ದಿ ಹೇಳಬೇಕು. ಸರಿ ದಾರಿಯತ್ತ ಸಾಗಿಸಬೇಕು. ಆದ್ರೆ ಇಲ್ಲೊಬ್ಬ ತಂದೆ ಮಗನನ್ನು ಕುಳ್ಳಿರಿಸಿಕೊಂಡು ಎಣ್ಣೆ ಪಾರ್ಟಿ ಮಾಡುತ್ತಿದ್ದ. ಕುಡಿತದ ಅಮಲೇರಿದರೆ ಕಾರಣ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಗಲಾಟೆ ತಾರಕಕ್ಕೇರಿ ಮಚ್ಚಿನಿಂದ ಕೊಚ್ಚಿ ತಂದೆಯೇ ಮಗನ ಕೊಲೆ ಮಾಡಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ . ಪ್ರದೀಪ್ (40) ಕೊಲೆಯಾದ ಮಗ, ರಮೇಶ್ ಆಚಾರ್ (65) ಕೊಲೆಗೈದ ತಂದೆ. ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದು ,ಇವರಿಬ್ಬರ ಗಲಾಟೆ ತಡೆಯಲಾರದೆ ಪ್ರದೀಪ್ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು. ಅಡಕೆ ಮಾರಿ ಬಂದಿದ್ದು , ಸಿಕ್ಕ ಹಣದಲ್ಲಿ ರಾತ್ರಿ ಅಪ್ಪ-ಮಗ ಇಬ್ಬರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ಗಲಾಟೆ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.

