ಅಪ್ರಾಪ್ತೆಯ ಮೇಲಿನ ದೌರ್ಜನ್ಯ : ಪೋಕ್ಸೊ ಕೇಸ್‌ನಲ್ಲಿ 71 ವರ್ಷದ ಅಜ್ಜನಿಗೆ 3 ವರ್ಷ ಜೈಲು ಶಿಕ್ಷೆ

0
128

ಉಡುಪಿ : ಖಾಸಗಿ ಮಳಿಗೆಯಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 71 ವರ್ಷದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗು ಪೋಕ್ಸೊ ನ್ಯಾಯಾಲಯ 3 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.

ಲೂಯಿಸ್ ರಂಜಲ್ (71) ಶಿಕ್ಷೆಗೊಳಗಾದವರು.

ಕಳೆದ ವರ್ಷ ಜು.12 ರಂದು ಸಂತ್ರಸ್ತ ಬಾಲಕಿ ತಾಯಿಯೊಂದಿಗೆ ನಗರದ ಮಾಲ್ಗೆ ತೆರಳಿದ್ದಾಗ ಆರೋಪಿಯೂ ಬಾಲಕಿಗೆ ಹಿಂದಿನಿಂದ ಬಂದು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಗಾಬರಿಗೊಂಡ ಬಾಲಕಿ ಹಿಂತಿರುಗಿದಾಗ ಕ್ಷಮೆ ಕೇಳಿದ್ದಾನೆ. ನಂತರ ಪುನಃ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 1 ಸಾವಿರ ಹಾಗು 2 ಸಾವಿರ ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here