ಖಾಸಗಿ ಎಂಜಿನಿಯರಿಂಗ್ ಪದವಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಕಾಮೆಡ್-ಕೆ ನಡೆಸಿದ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಶಿಶಿರ್ ಹೆಚ್ ಶೆಟ್ಟಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.
ರಾಷ್ಟçದಾದ್ಯಂತ 1,13,111 ವಿದ್ಯಾರ್ಥಿಗಳು ಬರೆದ ಈ ಪರೀಕ್ಷೆಯನ್ನು ಬರೆದಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜ್ ಗಮನಾರ್ಹ ಸಾಧನೆ ಮಾಡಿದೆ. ಮೂಡುಬಿದಿರೆ ಹರೀಶ ಶೆಟ್ಟಿ ಮತ್ತು ಸುಮಿತಾ ಶೆಟ್ಟಿ ಮಗನಾದ ಶಿಶಿರ್ ಹೆಚ್ ಶೆಟ್ಟಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ 664 ನೇ ಸ್ಥಾನ. ಜೆ.ಇ.ಇ ಮೈನ್ಸ್ ನಲ್ಲಿ 99.971 ಪರ್ಸಂಟೈಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿAಗ್ ವಿಭಾಗದಲ್ಲಿ 4ನೇ ರ‍್ಯಾಂಕ್, ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ದ್ವೀತಿಯ ಪಿಯುಸಿಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ರ‍್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳು, ಉತ್ಕöÈಷ್ಟ ಸಾಧನೆ ತೋರಿಸಿದ್ದು ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 15 ರ‍್ಯಾಂಕ್‌ಗಳು, ಜೆಇಇ ಅಡ್ವಾನ್ಸ್ನಲ್ಲಿ ರಾಷ್ಟçಮಟ್ಟದಲ್ಲಿ 5000 ರ‍್ಯಾಂಕ್‌ನ ಒಳಗೆ 6 ವಿದ್ಯಾರ್ಥಿಗಳು, ಸಿಇಟಿಯಲ್ಲಿ ನಾನಾ ವಿಭಾಗಗಳಲ್ಲಿ 100 ರೊಳಗೆ 13 ರ‍್ಯಾಂಕ್, 500 ರೊಳಗೆ 38 ರ‍್ಯಾಂಕ್, 1000 ರೊಳಗೆ 64 ರ‍್ಯಾಂಕ್ ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ. ಎನ್‌ಡಿಎ, ನಾಟ ಲಿಖಿತ ಪರೀಕ್ಷೆಗಳಲ್ಲಿ ಸಂಸ್ಥೆಯ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಷ್ಟಿçÃಯ ಮೆರಿಟೈಮ್ ಯೂನಿವರ್ಸಿಟಿ ಮುಕ್ತ ಸ್ಪರ್ಧೆಯಲ್ಲಿ 124ನೇ ಸ್ಥಾನ ಪಡೆಯುದರೊಂದಿಗೆ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆ ಗುಣಮಟ್ಟದ ಶಿಕ್ಷಣದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಫಲಿತಾಂಶವನ್ನು ಸಾಧಿಸಿದೆ.
ವಿದ್ಯಾರ್ಥಿಗಳ ಸಾಧನೆ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಮೆಡ್‌ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರ ಮಟ್ಟದಲ್ಲಿ ಮೊದಲ ರ‍್ಯಾಂಕ್
RELATED ARTICLES