ಕಾಲ್ತುಳಿತ ಪ್ರಕರಣ : ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ತಂದೆ

0
535

ಮಂಗಳೂರು/ಹಾಸನ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತು *ಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಹಾಸನದ ಬೇಲೂರಿನ 21 ವರ್ಷದ ಭೂಮಿಕ್ ಕೂಡ ಒಬ್ಬ. ಭೂಮಿಕ್ ಮೃತದೇಹವನ್ನು ಅವರ ಮನೆಯ ಸಮೀಪದ ಜಾಗದಲ್ಲಿ ಮಣ್ಣು ಮಾಡಲಾಗಿತ್ತು. ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಭೂಮಿಕ್ ತಂದೆ ಲಕ್ಷ್ಮಣ್ ಮಗನನ್ನು ನೆನೆದು ಕಣ್ಣೀರಾಗಿರುವ ದೃಶ್ಯವೊಂದು ವೈರಲ್ ಆಗಿದೆ.

ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿದ್ದಾರೆ, ಗೋಳಾಡಿದ್ದಾರೆ ಲಕ್ಷ್ಮಣ್. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಇದೇ ಜಾಗದಲ್ಲಿ ಮಗನನ್ನು ಮಲಗಿಸಿದ್ದೀನಿ. ನನ್ನ ಮಗನಿಗೋಸ್ಕರ ಮಾಡಿದ್ದ ಜಾಗ ಇದು. ನನ್ನ ಮಗನ ಜೊತೆನೆ ನಾನೂ ಮಲಗುತ್ತೀನಿ. ಈ ತರಹ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಗೋಳಾಡಿದ್ದಾರೆ.

LEAVE A REPLY

Please enter your comment!
Please enter your name here