ಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಗೋಮಾತೆಯ ಗೌರವದ ಅಭಿಯಾನ

0
6

ಭಾರತೀಯರು ಗೋಮಾತೆಗೆ ರಾಷ್ಟ್ರ ತಾಯಿ, ದೇವರು, ಪರಂಪರೆ, ರಾಷ್ಟ್ರೀಯ ಗೌರವವನ್ನು ನೀಡುವುದಕ್ಕಾಗಿ ಕಾನೂನು ರೂಪಿಸಬೇಕೆಂದು ಹಾಗೂ ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಗೌರವದ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಪ್ರಚಾರಕರ ಮುಖ್ಯನಾ ನಂದಿ ಬಾಬಾರ ಉಪಸ್ಥಿತಿಯಲ್ಲಿ ಗೋಮಾತ ಗೌರವದ ಅಭಿಯಾನ ನಡೆಯುತ್ತಿದೆ.

ಏಪ್ರಿಲ್ 27ರಂದು ಗೋಮಾತ ಗೌರವ ದಿನ ನಡೆಯಲಿದ್ದು ಇದಕ್ಕೆ ಯಾವುದೇ ದೇಣಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಅಭಿಯಾನದ ದ ಕ ಹಾಗೂ ಉಡುಪಿ ಜಿಲ್ಲಾ ನೇತೃತ್ವವನ್ನು ಸಾಯಿ ಈಶ್ವರ್ ಗುರೂಜಿ ವಹಿಸಿದ್ದು ಉಡುಪಿ ಜಿಲ್ಲೆಯ ವಿಜಯ ಕೊಡವೂರು, ಕಾಪು ತಾಲೂಕಿನ ಗೀತಾಂಜಲಿ ಸುವರ್ಣ, ಕಾರ್ಕಳ ತಾಲೂಕಿನ ರಮಿತಾ ಸೂರ್ಯವಂಶಿ, ಹೆಬ್ರಿ ತಾಲೂಕಿನ ಸಂದೇಶ, ಕುಂದಾಪುರ ತಾಲೂಕಿನ ಗಜೇಂದ್ರ, ಬೈಂದೂರು ತಾಲೂಕಿನ ನಾಗರಾಜ್, ಬ್ರಹ್ಮಾವರದ ರಾಘವೇಂದ್ರ ಗೋ ಸೇವೆಯಲ್ಲಿ ನಿರತರಾಗಿದ್ದು ಸಾರ್ವಜನಿಕರ ಸಹಿ ಸಂಗ್ರಹಿಸಿ ಸಂಬಂಧ ಪಟ್ಟ ತಹಶೀಲ್ದಾರರು, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಅರ್ಪಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಾಯಿ ಈಶ್ವರ ಗುರೂಜಿ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಧುಸೂದನ್ ನಾಯಕ್, ಧನರಾಜ್ ಶೆಟ್ಟಿ, ಮಧುಸೂದನ್ ಉರ್ವಸ್ಟೋರ್ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here