ಮುಲ್ಕಿ : ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆ ಕಾರ್ನಾಡು ಇಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸ್ಥಳೀಯ ಸಭಾಪಾಲನ ಸಮಿತಿಯ ಅಧ್ಯಕ್ಷರಾದ ರೆ. ವಿಲಿಯಂ ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶುಭ ಹಾರೈಸಿದರು.

ಮಾಜಿ ಮುಲ್ಕಿ ನಗರ ಪಂಚಾಯತ್ ಸದಸ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ.ಎಮ್. ಮಾತನಾಡಿ, ಸ್ವಾತಂತ್ರ್ಯದ ಹಾದಿ ಸುಗಮವಾಗಿರಲಿಲ್ಲ. ಅದು ಕಷ್ಟಕರವಾಗಿದ್ದರೂ ತಮ್ಮ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟವರು ಗಾಂಧೀಜಿ. ಬಡತನವನ್ನು ಮೆಟ್ಟಿ ನಿಂತು, ತಮ್ಮ ಸುಭದ್ರ ಆಡಳಿತದ ಮೂಲಕ ರಾಷ್ಟ್ರ ಗುರುತಿಸುವ ನಾಯಕರಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ. ಇಬ್ಬರು ನಾಯಕರ ಜನ್ಮ ದಿನವನ್ನು ಆಚರಿಸುವುದು ನಮ್ಮ ಕರ್ತವ್ಯ ಎಂದರು.
ಸರ್ವಧರ್ಮ ಪ್ರಾರ್ಥನೆ/ ಶ್ರಮದಾನ : ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಸರ್ವ ಧರ್ಮದ ಪ್ರಾರ್ಥನೆಯೊಂದಿಗೆ ಗಾಂಧೀಜಿಯವರ ಮೆಚ್ಚಿನ ಗೀತೆಗಳನ್ನು ಹಾಡಿದರು. ಬಳಿಕ ವಿದ್ಯಾರ್ಥಿ-ಶಿಕ್ಷಕರಿಂದ ಶ್ರಮದಾನ ನಡೆಯಿತು.
ವಿದ್ಯಾರ್ಥಿನಿ ಶಮ್ನ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಬಗ್ಗೆ ಮಾತನಾಡಿದರು.
ಈ ಸಂದರ್ಭ ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ, ಕಾರ್ಯಕ್ರಮ ಉಸ್ತುವಾರಿ ಶಿಕ್ಷಕರುಗಳಾದ ರೇಶ್ಮ, ದೀಪಕ್ ಬೀರ ಮತ್ತು ಜಯಶ್ರೀ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ಭೂಮಿಕ ಕಾರ್ಯಕ್ರಮ ನಿರೂಪಿಸಿ, ಅಮ್ನ ಮರಿಯಮ್ ಸ್ವಾಗತಿಸಿ, ಸಿಯೋನ ಗ್ರೇಸಿ ವಂದಿಸಿದರು.

