Saturday, June 14, 2025
HomeUncategorizedದಲಿತ ನಾಯಕನ ದಿಗ್ಬಂಧನ, ಕಾಂಗ್ರೆಸ್ ಅಂಧ ದರ್ಬಾರ್‌ಗೆ ಸಾಕ್ಷಿ - ಶ್ರೀನಿಧಿ ಹೆಗ್ಡೆ

ದಲಿತ ನಾಯಕನ ದಿಗ್ಬಂಧನ, ಕಾಂಗ್ರೆಸ್ ಅಂಧ ದರ್ಬಾರ್‌ಗೆ ಸಾಕ್ಷಿ – ಶ್ರೀನಿಧಿ ಹೆಗ್ಡೆ

ಉಡುಪಿ: ಸಾಂವಿಧಾನಿಕ ಹುದ್ದೆಯಲ್ಲಿರುವ ದಲಿತ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಕಾಂಗ್ರೆಸ್ ಗೂಂಡಾಗಳು ದಿಗ್ಬಂಧನ ಹಾಕಿ, ದಬ್ಬಾಳಿಕೆ ನಡೆಸಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರದ ಅಂಧ ದರ್ಬಾರ್‌ಗೆ ಸ್ಪಷ್ಟ ಸಾಕ್ಷಿ ಎಂದು ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಕಿಡಿಕಾರಿದ್ದಾರೆ.

ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸಿದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಎಂದು ಬಿಂಬಿಸುವ ಕಾಂಗ್ರೆಸ್ ನಾಯಕರು ತಮ್ಮ ನಡೆಯ ವಿರುದ್ದ ಟೀಕೆ ಮಾಡಿದವರನ್ನು, ಗೂಂಡಾಗಳ ಮೂಲಕ ದೌರ್ಜನ್ಯ ನಡೆಸುತ್ತಿರುವುದು ಕ್ಷೋಭೆಯಲ್ಲ. ಇಂತಹ ಘಟನೆಗಳು ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯನ್ನ ನೆನಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಶಾಶ್ವತ ಅಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿಯದೇ ಇರುವುದು ವಿಪರ್ಯಾಸ. ತಮ್ಮ ತಂದೆಯ ನೆರಳು ಇಲ್ಲದೆ ಇದ್ದಿದ್ದರೆ ಪಂಚಾಯತ್ ಸದಸ್ಯ ಆಗುವುದು ಕೂಡ ಪ್ರಿಯಾಂಕ್ ಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂತಹ ಹೊಲಸು ರಾಜಕಾರಣದಿಂದ ತಮ್ಮ ಮನಸ್ಥಿತಿಯನ್ನು ರಾಜ್ಯದ ಜನತೆಯ ಮುಂದೆ ಅವರೇ ಬಿಚ್ಚಿಟ್ಟಿದ್ದಾರೆ ಎಂದು ವ್ಯಂಗಿಸಿದ್ದಾರೆ.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ತನ್ನ ಸ್ವಂತ ಅಭಿಪ್ರಾಯವನ್ನು ತಿಳಿಸಲು ಸಾಧ್ಯವಾಗದ ಪರಿಸ್ಥಿತಿ ಈ ರಾಜ್ಯದಲ್ಲಿ ಉದ್ಭವವಾಗಿರುವುದು ದುರಂತ. ಕಾಂಗ್ರೆಸ್ ವಿರೋಧ ಪಕ್ಷದವನ್ನು ಪೊಲೀಸ್ ಇಲಾಖೆಯ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
ಛಲವಾದಿ ನಾರಾಯಣ ಸ್ವಾಮಿಯವರ ವಿರುದ್ಧ ದೌರ್ಜನ್ಯ ಎಸಗಿದ ಕಾಂಗ್ರೆಸ್ಸ್ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular