ಕರ್ವಾಲು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ

0
6

ಉಡುಪಿ : ಶ್ರೀ ವಿಷ್ಣು ಸ್ನೇಹ ಬಳಗ ಕರ್ವಾಲು ಇದರ ವತಿಯಿಂದ ಜೂನ್ 22ರಂದು ಕರ್ವಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಶಾಲಾ‌ ದತ್ತು ಸ್ವೀಕಾರದ ಅಂಗವಾಗಿ ದಾನಿಗಳಿಂದ ಸಂಗ್ರಹಿಸಿ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಷ್ಣು ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಶಾಲಾ ಹಿತೈಷಿಗಳು, ಹಳೆ ವಿದ್ಯಾರ್ಥಿ ರಾಮಚಂದ್ರ ನಾಯಕ್ ಮಣಿಪಾಲ, ರಾಘವೇಂದ್ರ ಪ್ರಭು ಕರ್ವಾಲು, ಗಣಪತಿ‌ ಪಾಟ್ಕರ್ ಶುಭ ಹಾರೈಸಿದರು.ಎಸ್ ಡಿ ಎಮ್ ಸಿ ಅಧ್ಯಕ್ಷೆ ಸಾವಿತ್ರಿ ಗಿರೀಶ್ ಉಪಸ್ಥಿತರಿದ್ದರು.

‌ಸಂಘದ ಸದಸ್ಯರುಗಳಾದ ರಾಘವೇಂದ್ರ ಆಚಾರ್ಯ, ವಿಘ್ನೇಶ್ ನಾಯಕ್ ವಿಷ್ಣಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಸಂಪತ್ ಪ್ರಭು, ನಾಗರಾಜ ಆಚಾರ್ಯ, ಹಿರಿಯರಾದ ದೇವೇಂದ್ರ ಪ್ರಭು ಶಾಲಾ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

ಕಳೆದ 8 ವರ್ಷಗಳಿಂದ ಶ್ರೀ ವಿಷ್ಣು ಸ್ನೇಹ ಬಳಗ ಸರಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಶಾಲೆಗೆ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ಬ್ಯಾಗ್, ಕೊಡೆ, ಪುಸ್ತಕ ಇತ್ಯಾದಿಗಳನ್ನು ಕೊಟ್ಟು ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಶಾಲೆಯನ್ನು ನಡೆಸುತ್ತಿದೆ.

LEAVE A REPLY

Please enter your comment!
Please enter your name here