ತುಳುವಲ್ಡ್ ಫೌಂಡೇಶನ್ ಕಟೀಲ್ ನ ತುಳುವ ಮಹಾಸಭಾದಿಂದ ನಡೆಸಲ್ಪಡುತ್ತಿರುವ ತುಳುವೇಶ್ವರ ದೇವಾಲಯದ ಪುನರುತ್ಥಾನದ ಪುಣ್ಯಕಾರ್ಯ ಹಾಗೂ ತುಳುವಲ್ಡ್ ಫೌಂಡೇಶನ್ ನ ಸಮಾಜಮುಖಿ ಕೆಲಸವನ್ನು ಬಹುವಾಗಿ ಶ್ಲಾಘಿಸಿದರು.
ಶ್ರೀಯುತ ಎಚ್.ಜಯವಂತ ರಾವ್ ಅವರನ್ನು ಉಡುಪಿ ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ, ರಕ್ಷಿತ್ ಮುನಿಯಾಲ್, ಪ್ರಶಾಂತ್ ಹಿರಿಯಡ್ಕ, ರಘುರಾಮ್ ಸುವರ್ಣ ಪೆರ್ಡೂರು, ಭಾಸ್ಕರ್ ಪೂಜಾರಿ ಹಿರಿಯಡ್ಕ, ಮಾಲತಿ ಆಚಾರ್ಯ ಹಿರಿಯಡ್ಕರವರು ತುಳುವ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಭೇಟಿ ನೀಡಿದರು.
ಶ್ರೀಯುತ ಎಚ್.ಜಯವಂತ ರಾವ್ ರವರ ಜೀವನ ಮತ್ತು ಸಾಧನೆ
ಉಡುಪಿ ಜಿಲ್ಲೆಯ ಹಿರಿಯಡ್ಕದ ಮತ್ತು ಎಚ್ ಸದಾಶಿವ ರಾವ್ ರವರ ಪುತ್ರರಾಗಿ 01-01-1953 ರಲ್ಲಿ ಜನಿಸಿರುವ ಇವರು ಅಂದಿನ ಕಾಲದಲ್ಲಿಯೇ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದರು. ನಂತರ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಜೀವ ಸದಸ್ಯರಾಗಿ, ಪಡಿ ವೆಲೇರೆಡ್ ಸಂಸ್ಥೆ ಮಂಗಳೂರು ನ ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಜಿಲ್ಲೆಯ ಸಲಹೆಗಾರರಾಗಿ, ತುಳುವಲ್ಡ್ ಫೌಂಡೇಶನ್ ನ ಸಂಚಾಲಕರಾಗಿ, ಆರೋಗ್ಯ ರಕ್ಷಾ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡಕದ ಸದಸ್ಯರಾಗಿ, ಆರಕ್ಷಕ ಠಾಣೆ ಜನಜಾಗೃತಿ ಸಮಿತಿ ಹಿರಿಯಡ್ಕದ ಸದಸ್ಯರು ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ್ ನಿರ್ಮಾಣ್ ಸ್ವಯಂಸೇವಕರು ಎಂಬ ಅಂದಿನ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಂಕಲ್ಪದಂತೆ ಉಡುಪಿ ಜಿಲ್ಲೆಯಲ್ಲಿ 6200 ಯುವ ಜನತೆಗೆ ತರಬೇತಿ ನೀಡುವ ಮೂಲಕ ಸದೃಢ ಭಾರತದ ನಿರ್ಮಾಣದ ಬಗ್ಗೆ ಪರಿಣಾಮಕಾರಿ ಸೇವೆಯು ಇವರದ್ದಾಗಿದೆ. ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಸರಕಾರದಿಂದ ಲಭಿಸಬಹುದಾದ ಗರಿಷ್ಠ ಪ್ರಮಾಣದ ಸೌಲಭ್ಯ ಸಹಕಾರಗಳನ್ನು ನೀಡಿದ ಹೆಗ್ಗಳಿಕೆ ಇವರಿಗಿದೆ. ಸೂರಿಲ್ಲದವರಿಗೆ ಇಂದಿರಾ ಆವಾಸ್, ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಗಳ ಸ್ಪಷ್ಟ ಅನುಷ್ಠಾನ.

ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿನ 1ನೇ ವಾರ್ಡಿನಲ್ಲಿ ಚುನಾಯಿತ ಪಂಚಾಯತ್ ಸದಸ್ಯನಾಗಿ ಸತತ 20 ವರ್ಷಗಳ ಕಾಲ ಸರಕಾರ ಮತ್ತು ಜನತೆಯ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಿದ್ದಾರೆ. ಪಡಿ ವೆಲೋರೆಡ್ ಸ್ವಯಂಸೇವಾ ಎಂಬ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವ ಇವರ ಸೇವೆಯನ್ನು ಮನಗಂಡು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ. ಅದರಲ್ಲಿ ಪ್ರಮುಖವಾಗಿ ಸಮಾಜ ಸೇವೆ ಅಡಿಯಲ್ಲಿ ನೀಡಲ್ಪಡುವ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2025 ಕ್ಕೆ ಭಾಜನರಾಗಿದ್ದಾರೆ.
ಪತ್ನಿ,ಪುತ್ರ,ಪುತ್ರಿ ,ಅಳಿಯ ಸೊಸೆ ಮೊಮ್ಮಕ್ಕಳ ತುಂಬ ಸಂಸಾರಿಯಾಗಿರುವ ಇವರಿಗೆ ಮತ್ತು ಕುಟುಂಬಕ್ಕೆ ಬಸ್ರೂರು ಕ್ಷೇತ್ರದ ತುಳುವೇಶ್ವರ ಹಾಗೂ ತುಳುವೇಶ್ವರಿ ದೇವರು, ದೈವಗಳು ಸುಖ ಶಾಂತಿ ನೆಮ್ಮದಿ ಸಂತೋಷ ಆಯುರ್ ಆರೋಗ್ಯವನ್ನು ಕರುಣಿಸಿ ಇನ್ನೂ ಹೆಚ್ಚಿನ ಸಮಾಜಮುಖಿ ಸೇವೆಗಳು ಇವರಿಂದ ನೆರವೇರುವಂತಾಗಲಿ ಎಂಬುದು ನಮ್ಮ ಆಶಯ.

ಬರಹ – ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು

