ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ಕಾಸರಗೋಡು ವೆಸ್ಟ್ ಯುನಿಟ್ ನೇತೃತ್ವದಲ್ಲಿ ಜಲ್ಲಾ ಕಾರ್ಯಾಲಯವಾದ ನಮ್ಮ ಎಕೆಪಿಎ ಭವನದಲ್ಲಿ ದೀಪಾವಳಿ ಆಚರಿಸಲಾಯಿತು.ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೊಸದಿಗಂತ ಕನ್ನಡ ದಿನ ಪತ್ರಿಕೆಯ ಕಾಸರಗೋಡು ಹಿರಿಯ ವರದಿಗಾರ ಶ್ರೀ ಜಗನ್ನಾಥ ಶೆಟ್ಟಿ ಇವರು ದೀಪಾವಳಿಯ ಶುಭಾಶಂಸನೆಗೈದರು.

ಎಕೆಪಿಎ ಕಾಸರಗೋಡು ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ. ಎಂ. ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ಶಾಲಿನಿ ರಾಜ್ ಸ್ವಾಗತಿಸಿ ಯುನಿಟ್ ಸಮಿತಿ ಸದಸ್ಯ ರತೀಶ್ ರಾಮು ಧನ್ಯವಾದ ನೀಡಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

