ಕೊಡವೂರು ಗೋಶಾಲೆಗೆ ಒಣಹುಲ್ಲಿನ ದಾನ

0
7

ಉಡುಪಿ ತಾಲೂಕಿನ ಕೊಡವೂರಿನ ಪೇಜಾವರ ಅಧೋಕ್ಷಜ ಮಠದ ಗೋಶಾಲೆಗೆ ಗೋವುಗಳ ಮೇವಿಗಾಗಿ ಒಂದು ಟೆಂಪೋ ಒಣಹುಲ್ಲನ್ನು ದಾನವಾಗಿ ನೀಡಲಾಯಿತು.

ಕುಂಜಾರಗಿರಿಯ ನಂದ ಗಣೇಶ ಅವರು ಒಣಹುಲ್ಲಿನ ದಾನಿಗಳಾಗಿದ್ದು, ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಪಸ್ಥಿತರಿದ್ದರು.

ಕೊಡವೂರು ಗೋಶಾಲೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಗೋವುಗಳು, ಅಪಘಾತದಿಂದ ಗಾಯಗೊಂಡ ಗೋವುಗಳು ಹಾಗೂ ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳಿಗೆ ಆಶ್ರಯ ನೀಡಲಾಗುತ್ತಿದೆ. ಇಂತಹ ಗೋವುಗಳ ಪಾಲನೆ-ಪೋಷಣೆಗೆ ಮೇವಿನ ಅಗತ್ಯವಿದ್ದು, ದಾನಿಗಳ ಸಹಕಾರದಿಂದ ಗೋಶಾಲೆಯ ನಿರ್ವಹಣೆಗೆ ನೆರವಾಗುತ್ತಿದೆ.