ದೊಡ್ಡಣಗುಡ್ಡೆ ಜೆಸಿಐ ವತಿಯಿಂದ ದಾನ್ ಕಾರ್ಯಕ್ರಮ

0
10

ಉಡುಪಿ: ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಉಡುಪಿ ಘಟಕದಿಂದ ದಿನಾಂಕ 28/5/26 ರಂದು ದಾನ್ ಕಾರ್ಯಕ್ರಮದಡಿ ಉಡುಪಿಯ ಲಕ್ಷ್ಮೀನಗರದ ಶ್ರೀ ಕೃಷ್ಣಾನುಗ್ರಹ ಸಂಸ್ಥೆ ಯ ಮಮತೆಯ ತೊಟ್ಟಿಲು ನ ಅನಾಥ ಮಕ್ಕಳಿಗೆ ಚಪ್ಪಲು ಮತ್ತು ಬ್ಯಾಗ್ ಗಳನ್ನು ದಾನ ಮಾಡಿದರು.ಸುಮಾರು ಹದಿನಾಲ್ಕು ಅನಾಥ ಮಕ್ಕಳ ಶಿಕ್ಷಣ, ಆಟ,ಪಾಠದ ಚಟುವಟಿಕೆಗಳಿಗೆ ಅನುಕೂಲತೆಯ ದೃಷ್ಟಿಯಿಂದ ಈ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಹಾಗೂ ಐಸ್ ಕ್ರೀಂ, ಸ್ವೀಟ್ಸ್ ನೀಡಲಾಯಿತು.ಘಟಕದ ಹತ್ತು ಹಲವಾರು ಸಾಮಾಜಿಕ ಸೇವೆಯ ಕಾರ್ಯಕ್ರಮದಲ್ಲಿ ಇದು ಒಂದಾಗಿದೆ ಎಂದು ಘಟಕದ ಅಧ್ಯಕ್ಷರಾದ ಜೆಸಿ ಭರತ್ ಕುಮಾರ್ ನುಡಿದರು.ಕೃಷ್ಣಾನುಗ್ರಹ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ಮರಿಯ ಇವರು ಮಾತನಾಡಿ ಜೆಸಿಐ ಘಟಕದಿಂದ ಪ್ರತಿ ವರ್ಷ ಸಂಸ್ಥೆಗೆ ಕೊಡುಗೆ ನೀಡುವುದರ ಮೂಲಕ ಅನಾಥ ಮಕ್ಕಳ ಆಸರೆಯಾಗಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಸ್ಥಾಪಕರಾದ ಜೆಸಿ ಎಂ .ಎನ್ ನಾಯಕ್ ಘಟಕದ ಕುರಿತು ಪ್ರಸ್ತಾವನೆಗೈದರು.
ಈ ದಾನ್ ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಜೆಸಿ ವಿಘ್ನೇಶ್, ಪೂರ್ವಾಧ್ಯಕ್ಷರಾದ ಜೆಸಿ ಕೇಶವ ಆಚಾರ್ಯ, ಜೆಸಿ ಉಮೇಶ್ ಆಚಾರ್ಯ, ಕೋಶಾಧಿಕಾರಿ ಜೆಸಿ ಪ್ರಶಾಂತ್ ಆಚಾರ್ಯ, ಜೆಸಿ ಸತೀಶ್ ಆಚಾರ್ಯ, ಮಹಿಳಾ ಪ್ರತಿನಿಧಿ ಜೆಸಿ ಆಶಾ, ಜೆಸಿ ಸವಿತಾ, ಜೆಜೆಸಿ ಚೇರ್ ಪರ್ಸನ್ ಜೆಸು ಆತ್ಮೀ, ಜೆಜೆಸಿ ಪ್ರಾರ್ಥನಾ, ಜೆಜೆಸಿ ಆರ್ಯನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here