ಬೆಹರಿನ್ ಬಿಲ್ಲವ ಸಂಘದಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಧನ ಸಹಾಯ

0
9

ಉಡುಪಿ : ಬೆಹರಿನ್ ಬಿಲ್ಲವ ಸಂಘದ ವತಿಯಿಂದ ವಿದ್ಯಾರ್ಥಿಗಳಾದ ಶ್ರೀಶ ಕೋಟ್ಯಾನ್ ಮತ್ತು ನಿಶಾಂತ್ ಅವರಿಗೆ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಧನ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಹರಿನ್ ಬಿಲ್ಲವ ಸಂಘದ ಅಧ್ಯಕ್ಷ ರಾಜ್ ಸುವರ್ಣ ಅವರ ನೇತೃತ್ವದಲ್ಲಿ ಪೂರ್ವಾಧ್ಯಕ್ಷ ಹರೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕುಲದೀಪ್, ರೋಟರಿ ಮಾಜಿ ಅಧ್ಯಕ್ಷ ರಾಮ ಟಿ. ಪೂಜಾರಿ, ಸಾವಿತ್ರಿ ಗಣೇಶ್, ಪ್ರಭಾ ಕಾಪು ಹಾಗೂ ಸಮಾಜ ಸೇವಕಿ ಗೀತಾಂಜಲಿ ಸುವರ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಮಕ್ಕಳಿಗೆ ಹೆಚ್ಚಿನ ನೆರವು ನೀಡುವುದಾಗಿ ಸಂಘದ ಪ್ರತಿನಿಧಿಗಳು ತಿಳಿಸಿದರು. ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗೆ ಸಮಾಜದ ಸಹಕಾರ ಅಗತ್ಯವಾಗಿದ್ದು, ಇಂತಹ ನೆರವುಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣದತ್ತ ಮತ್ತಷ್ಟು ಪ್ರೇರಣೆ ನೀಡುತ್ತದೆ.