ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 73ನೇ ಯೋಜನೆಯಡಿ ಮೇ ತಿಂಗಳ ಸಹಾಯ ಕಾರ್ಯಕ್ರಮವಾಗಿ, ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕದಲ್ಲಿ ವಾಸಿಸುತ್ತಿರುವ ಗಣೇಶ್ ಹಾಗೂ ಗೌತಮಿ ದಂಪತಿಯ 10 ವರ್ಷದ ಪುತ್ರಿ ಸಾನ್ವಿ ಗಂಭೀರ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾಳೆ.
ಇದುವರೆಗೆ ಚಿಕಿತ್ಸೆಗಾಗಿ ಸುಮಾರು 6 ಲಕ್ಷ ರೂಪಾಯಿ ಖರ್ಚಾಗಿದ್ದು, ಪೈಂಟಿಂಗ್ ಕೆಲಸ ಮಾಡುತ್ತಿರುವ ತಂದೆ ಗಣೇಶ್ ಅವರಿಗೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಈ ಕಾರಣದಿಂದ ಕುಟುಂಬವು ಸಹೃದಯಿಗಳ ನೆರವಿಗಾಗಿ ವಿನಂತಿ ಮಾಡುತ್ತಿದೆ.
ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ನೀಡಿದರೆ, ಈ ಬಡ ಕುಟುಂಬಕ್ಕೆ ದೊಡ್ಡ ಆಧಾರವಾಗುತ್ತದೆ. ಮಾನವೀಯತೆಯ ದೃಷ್ಟಿಯಿಂದ ಎಲ್ಲರೂ ಕೈಲಾದಷ್ಟು ಧನಸಹಾಯ ನೀಡಿ ಈ ಮಗು ಬದುಕಿಗೆ ಹೊಸ ಆಶಾಕಿರಣ ನೀಡೋಣ ಎಂದು ಸಂಸ್ಥೆ ವಿನಂತಿಸುತ್ತದೆ.
ಸಹಾಯಕ್ಕಾಗಿ ವಿವರಗಳು:
Union Bank – A/C No: 520101016787869
IFSC Code: UBIN0900826
Google Pay: 9113978215
ಬನ್ನಿ, ದಿಕ್ಕು ತೋಚದೆ ಪರಿತಪಿಸುವ ಮುಗ್ಧ ಜೀವಗಳ ಕಣ್ಣೀರನ್ನು ಒರೆಸುವ ಕೈಗಳು ನಮ್ಮದಾಗಲಿ.

