ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಪಾರ್ಟ್ಮೆಂಟ್ ವಿದ್ಯಾರ್ಥಿಗಳಿಗೆ ” “ಫ್ಯಾಷನೋವ ಫೆಸ್ಟ್ 2026 “

0
5


ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಫ್ಯಾಷನ್ ಡಿಪಾರ್ಟ್ಮೆಂಟ್ ವಿದ್ಯಾರ್ಥಿಗಳಿಗೆ “ಫ್ಯಾಷನೋವ ಫೆಸ್ಟ್ 2026″ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಸೆಸ್ ಇಂಡಿಯಾ,ಕರ್ನಾಟಕ, ಮಂಗಳೂರು,ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಕಿರೀಟ ವಿಜೇತೆ ಶ್ರೀಮತಿ ”ತಷ್ಮ ಚೇತನ್” ಇವರು ವಹಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ “ಪ್ರತಿಯೊಬ್ಬರ ಕನಸುಗಳು ಅವರ ಮನಸ್ಸಿನ ಆಶೆಗಳು ಮತ್ತು ಆಕಾಂಕ್ಷೆಗಳು ಆಗಿರುತ್ತವೆ. ನಮ್ಮ ಗುರಿಗಳು ಆ ಕನಸುಗಳನ್ನು ಸಾಕಾರರಾಗೊಳಿಸಲು ನಾವು ನಿಗದಿಪಡಿಸುವ ಸ್ಪಷ್ಠ ಮಾರ್ಗವಾಗಿರುತ್ತಾವೆ.

ಇಂದಿನ ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಪಡೆಯಲು ಸಾಧ್ಯವಿದೆ ಸಾಕಷ್ಟು ಜ್ಞಾನ ಹಾಗೂ ಕೌಶಲ್ಯಗಳು ಇಲ್ಲಿ ಮುಖ್ಯವಾಗುತ್ತದೆ ಎ0ದರು.

ಇನ್ನೊರ್ವ ಮುಖ್ಯ ಅತಿಥಿ ಮಿಸ್ಟರ್ ಇಂಡಿಯಾ,ಕರ್ನಾಟಕ,ಮಂಗಳೂರು ವಿಭಾಗದ ಕಾರ್ಯಕ್ರಮದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ “ಶ್ರೀಯುತ ‘ದೀಪಕ್ ಗಂಗೂಲಿ ‘ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ ‘ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ವಾದ ಸಾಮರ್ಥ್ಯ ಇದ್ದೆ ಇರುತ್ತದೆ, ಸರಿಯಾದ ವಿದ್ಯಾಭ್ಯಾಸವನ್ನು ಮಾಡುವುದರ ಜೊತೆಗೆ ನಮ್ಮ ಕನಸನ್ನು ಈಡೇರಿಸಿ ಕೊಳ್ಳುವಲ್ಲಿ ಪರಿಶ್ರಮಪಡಬೇಕು ಹಾಗೂ ಆಯ್ಕೆ ಮಾಡಿಕೊಂಡಿರುವ ಕ್ಷೇತದ ಬಗ್ಗೆ ಸಾಕಷ್ಟು ತಿಳುವಳಿಕೆ ಇರಬೇಕು ಎ0ದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ಆಡಳಿತ ಅಧಿಕಾರಿ ಶ್ರೀಮತಿ ಮಮತಾ, ಕಾಲೇಜಿನ ಪ್ರಾ0ಶುಪಾಲರದ ಶ್ರೀಮತಿ ಡಾ,ಸೀಮಾ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ರಾಝಿಕ, ಫ್ಯಾಷನ್ ಕೋರ್ಸ್ ವಿಭಾಗದ ಮುಖ್ಯಸ್ಥರಾದ ಉಪನ್ಯಾಸಕಿ ಕುಮಾರಿ ಜನಿತಾ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ವೃಂದ ತೃತೀಯ ಎಫ್,ಡಿ ಸ್ವಾಗತವನ್ನು ವಿದ್ಯಾರ್ಥಿನಿ ನವ್ಯಶ್ರೀ ದ್ವಿತೀಯ ಎಫ್,ಡಿ. ಧನ್ಯವಾದವನ್ನು ವಿದ್ಯಾರ್ಥಿನಿ ಅಲೀನಾ

LEAVE A REPLY

Please enter your comment!
Please enter your name here