ಕಾಪುವಿನಲ್ಲಿ ತಂದೆ-ಮಗಳು ನಾಪತ್ತೆ : ಪೊಲೀಸರಿಗೆ ದೂರು

0
116

ಕಾಪು : ಉಳಿಯಾರಗೋಳಿ ಗ್ರಾಮದ ಕಲ್ಯಾ ಭರತ್ ನಗರ ನಿವಾಸಿ ದಿನೇಶ್ ಶೆಟ್ಟಿಗಾರ (45) ಹಾಗೂ ಅವರ 5 ವರ್ಷದ ಪುತ್ರಿ ವಿಸ್ಮಿತಾ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ದಿನೇಶ್ ಶೆಟ್ಟಿಗಾರ ಅವರು, ಸೆ.26ರಂದು ಮಗಳ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಆಕೆಗೆ ಹೊಸ ಬಟ್ಟೆ ತೆಗೆದುಕೊಡಿಸುವುದಾಗಿ ತಿಳಿಸಿ, ಸೆ.25ರಂದು ಸಂಜೆ ಮನೆಯಿಂದ ಮಗಳನ್ನು ಕರೆದುಕೊಂಡು ಹೊರಟಿದ್ದರು ಎನ್ನಲಾಗಿದೆ. ಆದರೆ ಬಳಿಕ ತಂದೆ-ಮಗಳು ಇಬ್ಬರೂ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ.

ಕುಟುಂಬಸ್ಥರು ಹಾಗೂ ಪರಿಚಯಸ್ಥರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತಂದೆ-ಮಗಳ ಪತ್ತೆಗೆ ಮುಂದಾಗಿದ್ದಾರೆ.