
ಕುಶಾಲನಗರ : ಕೊಡಗು ಜಿಲ್ಲಾ ಅಹಿಂದ ಸಂಘಟನೆಯ ನೂತನ ಸಮಿತಿ ರಚನಾ ಸಭೆ ಕುಶಾಲನಗರದ ಕುಡ್ಲೂರುವಿನ ಹಳ್ಳಿಮನೆ ರೆಸಾರ್ಟ್ನಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕೊಡಗು ಜಿಲ್ಲಾಧ್ಯಕ್ಷರಾಗಿ ಸಮಾಜ ಸೇವಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ನಾಪಂಡ ಮುತ್ತಪ್ಪರವರು ಆಯ್ಕೆಯಾದರು. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಟಿ.ಈ ತೋಳೂರು ಶೆಟ್ಟಳ್ಳಿಯವರು ಎಲ್ಲರ ಸಹಮತದಿಂದ ಆಯ್ಕೆಯಾದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ನಾಪಂಡ ಮುತ್ತಪ್ಪರವರು ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರು ಸಂವಿಧಾನಾತ್ಮಕವಾಗಿ ಸಿಗಬೇಕಾದ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದು ಅದನ್ನು ಅವರು ಪಡೆಯುವಂತೆ ಮಾಡಲು ಈ ಸಂಘಟನೆ ಬಹಳ ಪ್ರಾಭಲ್ಯತೆ ಪಡೆದಿದೆಯೆಂದರು. ಅಧಿಕಾರದ ಹಂಚಿಕೆ ಕೇವಲ ಮೇಲ್ವರ್ಗದ ಜನರಿಗೆ ಸೀಮಿತವಾಗದೆ ಕೆಳವರ್ಗದ ಜನರು ಸಹಾ ಎಲ್ಲಾ ತರಹದ ಅಧಿಕಾರ ಸವಲತ್ತುಗಳನ್ನು ಅನುಭವಿಸುವಂತಾಗಬೇಕು ಎಂಬುದೆ ಈ ಅಹಿಂದ ಸಂಘಟನೆಯ ಮೂಲ ಉದ್ದೇಶವೆಂದರು. ಇದು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿರದೆ ರಾಜಕೀಯವಾಗಿಯೂ ಯಾವುದೆ ಸವಲತ್ತುಗಳು ಸಿಗದೆ ತುಳಿತ ಮತ್ತು ಶೋಷಣೆಗೆ ಒಳಗಾಗುತ್ತಿರುವ ಸಮುದಾಯದ ಹಕ್ಕುಗಳು ದೊರೆಯುವಂತಾಗಬೇಕೆಂಬ ಧ್ವನಿ ನಮ್ಮ ಅಹಿಂದ ಸಂಘಟನೆಯ ಮುಖ್ಯ ಧ್ಯೆಯವಾಗಿದೆ ಎಂದು ಹೇಳಿದರು.
ಕ.ಕೆ.ಮಂಜುನಾಥ್ರವರು ಮಾತನಾಡಿ ಅಹಿಂದ ಎಂಬ ಪದವೇ ರಕ್ಯ ಸಿಂಚನವಾಗಿ ಮೈರೊಮಾಂಚನಗೊಳ್ಳುತ್ತದೆ. ಇಂದಿರಾಗಿಂಧಿಯವರು ಉಳುವನೆ ಭೂಮಿಯ ಒಡೆಯ ಎಂಬ ಸಿಂದ್ದಾಂತ ಜಾರಿಗೆ ತಂದು ಹಿಂದುಳಿದ ವರ್ಗಗಳ ಹಿತಕ್ಕೆ ದಾರಿಮಾಡಿ ಕೊಟ್ಟವರನ್ನು ಹಾಗೂ ದೆವರಾಜ ಅರಸರ ಸೇವೆಯನ್ನು ಸ್ಮರಿಸಿದರು.
ನಂದಕುಮಾರ್ ರವರು ಮಾತನಾಡಿ ನವೆಂಬರ್ ೨೬ ರಂದು ಅಹಿಂದ ಬಳಗದಿಂದ ಸಂವಿಧಾನ ದಿನವನ್ನು ಆಚರಿಸಲು ಪೂರ್ವಭಾವಿ ಸಿದ್ದತೆಗಳು ನಡೆಯುತ್ತಿದೆ . ಸಂವಿಧಾನ ಶಿಲ್ಪಿಯಾದ ಡಾ.ಬಾಬಾ ಸಾಹೇಬ್ ಅಂಬೇಡ್ಕರವರಿಗೆ ಹಿಂದುಳಿದ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕೆಂಬ ನಿಟ್ಟಿನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಿದರು.
ಕೆ.ಪಿ.ಸಿ.ಸಿ.ಸದಸ್ಯರಾದ ಕೆ.ಎ.ಯಾಕೂಬ್ ರವರು ಮಾತನಾಡಿ ಸಮುದಾಯಕ್ಕೆ ಒಳಿತು ಮಾಡುವವರಿಗೆ ಕಂಟಕ ತಪ್ಪಿದ್ದಲ್ಲ , ಯೋಜನೆ ರೂಪಿಸಿ ನಮ್ಮ ಸಂಘಟನೆಯನ್ನು ಒಡೆಯಲು ಪ್ರಯತ್ನಿಸುತ್ತಾರೆ , ಅಂತಹವರ ಮುಂದೆ ನಾವು ಪ್ರಭಲವಾಗಿ ನಿಂತು ಬೆಳೆಯಬೇಕು ಎಂದರು. ಕೊಡಗು ಜಿಲ್ಲೆಯ ಈ ಹಿಂದೆ ಇದ್ದ ಅಹಿಂದ ಒಕ್ಕೂಟದ ಹಳೆಯ ಬೇರುಗಳನ್ನು ಗಣನೆಗೆ ತೆಗೆದುಕೊಂಡು ಸಂಘಟನೆಯನ್ನು ಕಟ್ಟಿ ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳಿಗೆ ಹೋರಾಡಬೇಕಾಗಿದೆ ಇಲ್ಲದಿದ್ದರೆ ಮುಂದೊಂದು ದಿನ ನಾವು ಮತದಾನದ ಹಕ್ಕನ್ನೂ ಕಳೆದುಕೊಂಡರು ಆಶ್ಚಯವಿಲ್ಲ ಆದರಿಂದ ಎಲ್ಲರೂ ಜೊತೆಯಾಗಿ ಈ ಸಂಘಟನೆಯ ಬಲ ವರ್ಧನೆಗೆ ಸಹಕರಿಸಬೇಕೆಂದು ವಿನಂತಿಸಿದರು.
ಅಲ್ಲದೆ ವೇದಿಕೆಯಲ್ಲಿದ್ದ ಇನ್ನಿತರ ಪ್ರಮುಖರು ಸಹಾ ಮಾತನಾಡಿ ಅಹಿಂದಗೆ ಶುಭಕೋರಿದರು.
ನಂತರ ಸಭೆಯಲ್ಲಿ ಮುಕ್ತವಾಗಿ ಜನರಿಗೆ ಈ ಒಕ್ಕೂಟದ ಬಗ್ಗೆ ಪ್ರಶ್ನಿಸಲು ಮತ್ತು ಚರ್ಚಿಸಲು ಅವಕಾಶನೀಡಲಾಯಿತು. ಸಭೀಕರು ಒಬ್ಬರ ನಂತರ ಇನ್ನೊಂಬರಂತೆ ತಮ್ಮ ಅಭಿಪ್ರಾಯ ಮತ್ತು ಗೊಂದಲಗಳನ್ನು ಮುಕ್ತವಾಗಿ ವಿಮರ್ಶಿಸಿದರು.
ವೇದಿಕೆಯಲ್ಲಿ ದಲಿತ ಸಮುದಾಯದ ಮುಖಂಡರಾದ ಹೆಚ್.ಎಂ.ನಂದಕುಮಾರ್, ಕೆ.ಪಿ.ಸಿ.ಸಿ ಸದಸ್ಯರು ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಹಿರಿಯ ನಾಯಕರಾದ ಕೆ.ಎ.ಯಾಕೂಬ್, ನೂತನ ಲ್ಯಾಂಪ್ ಸೊಸೈಟಿಯ ಮಹಾಮಂಡಲದ ರಾಜ್ಯಾಧ್ಯಕ್ಷರಾದ ಅರುಣ್ ರಾವ್, ಹಿರಿಯ ವಕೀಲರಾದ ಬಿ.ಈ.ಜಯೇಂದ್ರ ,
ಪೊನ್ನಂಪೇಟೆಯ ಬಾಪು.ಟಿ,ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎ ಆದಂ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ಶ್ರೀಮತಿ ಅನಿತಾರವರು ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿಯಾದ ಸುರೇಶ್ ರವರು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಪ್ರಿತುನ್ ಪೂವಣ್ಣ ಅಯ್ಯನೆರವಂಡ ರವರು ಸ್ವಾಗತ , ಛಾಯಾಗ್ರಹಣ ಹಾಗೂ ವಂದನಾರ್ಪಣೆಯನ್ನು ನೆರವೇರಿಸಿದರು.
ವರದಿ: ಪ್ರಿತುನ್ ಪೂವಣ್ಣ

