ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು “ಶ್ರೀನೋವಾ 2026” ರಾಷ್ಟ್ರೀಯ ಅಂತರ್ ಕಾಲೇಜು ಪಿ ಯು ವಿದ್ಯಾರ್ಥಿಗಳ ಸ್ಪರ್ಧೆಯನ್ನು ಏರ್ಪಡಿಸಿದೆ. ಅಕ್ಟೋಬರ್ 30 ಮತ್ತು 31 ರಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಮೂರು ಕ್ಯಾಂಪಸ್ ಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು-“ಒಂದಾಗಿ, ಸ್ಪರ್ಧಿಸಿ, ಸಂಭ್ರಮಿಸಿ” ಎಂಬ ವಿಶೇಷ ಟ್ಯಾಗ್ ಲೈನ್ ನೀಡಲಾಗಿದೆ.
ಒಟ್ಟು 32 ಸ್ಪರ್ಧೆಗಳು ನಡೆಯಲಿದ್ದು ಸಾಂಸ್ಕೃತಿಕ, ಕ್ರೀಡೆ, ಆರೈಕೆ, ಆಹಾರ, ವಿಶೇಷ ಪರಿಣತಿ, ಉದ್ಯೋಗ ಹಾಗೂ ತಾಂತ್ರಿಕತೆಯ ವಿಷಯಗಳನ್ನು ಒಳಗೊಂಡಿದೆ.
ಒಟ್ಟು ಎರಡುವರೆ ಲಕ್ಷದ ನಗದು ಪುರಸ್ಕಾರವನ್ನು ಇದಕ್ಕಾಗಿ ಮೀಸಲಿಧಿಸಿದ್ದು ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಪುರಸ್ಕಾರ, ಒಟ್ಟು ಅಂಕಗಳ ಆಧಾರದಲ್ಲಿ ಪಿಯು ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ನಗದು ಪುರಸ್ಕಾರಗಳು ಲಭಿಸಲಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ 8660429590 /8310598016 /9731453307 ಗೆ ಸಂಪರ್ಕಿಸಬಹುದು.
