ಕಾಸರಗೋಡು : ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇವರ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಕಳೆದ ಆದಿತ್ಯವಾರ ಸಂಜೆ ಕರಂದಕ್ಕಾಡ್ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ LKG ಯಿಂದ Plus 2 ವರೆಗಿನ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರಗಿತು.

ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮಾಜಿ ಡೆಪ್ಯೂಟಿ ತಹಸೀಲ್ದಾರ್ ಶ್ರೀಮತಿ ಚಂದ್ರಕಲಾ ಸಸಿಹಿತ್ಲು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮೊದಲಿಗೆ LKG ಮಕ್ಕಳಿಗೆ ಪುಸ್ತಕ ವಿತರಣೆಗೆಯ್ಯುವ ಮೂಲಕ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ರಘು ಕೆ ಮೀಪುಗುರಿ ಅಧ್ಯಕ್ಷತೆ ವಹಿಸುತ್ತ ತಮ್ಮ ಭಾಷಣದಲ್ಲಿ ಬಿಲ್ಲವ ಸಮಾಜದ ಮಕ್ಕಳಲ್ಲಿ ವಿದ್ಯಾಭ್ಯಾಸವನ್ನು ಪ್ರೆರೇಪಿಸಲು ಶ್ರೀ ನಾರಾಯಣ ಗುರುಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಲು ಕರೆ ನೀಡಿದ್ದರ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಯಾಗಿ ನಗರ ಸಭಾ ಸದಸ್ಯ ಹರೀಶ್ ಕೆ ಆರ್ ಮಾತನಾಡುತ್ತಾ ನಮ್ಮ ಸಮಾಜದ ಮಕ್ಕಳು PSC ಪರೀಕ್ಷೆಯ ಕಡೆಗೆ ಗಮನ ನೀಡಿ ಸರಕಾರ ದ ಉನ್ನತ ಹುದ್ದೆಯನ್ನು ಪಡೆಯಲು ಗಮನವಹಿಸಬೇಕೆಂದು ಹೇಳಿದರು.
ಗೌರವಧ್ಯಕ್ಷರಾದ ಎ ಕೇಶವ ಇವರು ಇತೀಚೆಗೆ ನಮ್ಮ ಸಮಾಜವನ್ನು ದೂಶಿಸುವ ಕೆಲವು ವಿದ್ಯಾಮಾನದ ಕಡೆಗೆ ಗಮನ ನೀಡುವಂತೆ ಹಾಗೂ ನಮ್ಮ ಮಕ್ಕಳು ದಾರಿ ತಪ್ಪದಂತೆ ಗಮನ ಹರಿಸಬೇಕು ಎಂದರು. ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಸುವರ್ಣ, ಬಿಲ್ಲವ ಮಹಾ ಮಂಡಳಿ ಸದಸ್ಯ ಸುಕಿರ್ತಿ ವರ್ಮಾ ಇವರು ಉಪಸ್ಥಿತರಿದ್ದರು. ಶಮ್ಮಿ ಕುಮಾರ್, ಕಮಲಾಕ್ಷ ಸೂರ್ಲು, ರೋಹಿಣಿ, ಅಶೋಕ್ ಬೀರಂತಬೈಲ್, ಸಂತೋಷ್, ಸತೀಶ್, ಮೈಂದಪ್ಪ, ಇನ್ನಿತರರು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸ್ವಾಗತಿಸಿ ಕಮಲಾಕ್ಷ ಸೂರ್ಲು ವಂದಿಸಿದರು, ಪ್ರೇಮ್ ಜಿತ್ ಕಾರ್ಯಕ್ರಮ ನಿರೂಪಿಸಿದರು.

