ಪಕ್ಷಿಕೆರೆ ಹೆಸರಿನ ತುಳು ಲಿಪಿಯ ನಾಮಫಲಕದ ಅನಾವರಣ ಕಾರ್ಯಕ್ರಮ

0
1

ಪಕ್ಷಿಕೆರೆ : ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮಂಗಳೂರು, ಮೈ ಭಾರತ್ ದ. ಕ, ಕೆಮ್ರಾಲ್ ಗ್ರಾಮ ಪಂಚಾಯತ್,ಶ್ರೀ ವಿನಾಯಕ ಮಹಿಳಾ ಮಂಡಳಿ ಇವುಗಳ ಸಹಯೋಗದಲ್ಲಿ ದಿನಾಂಕ 14.06.26 ರಂದು ಎಸ್ ಕೋಡಿ – ಪಕ್ಷಿಕೆರೆ ರಸ್ತೆಯ ಮಾರುತಿ ನಗರದ ಬಳಿ ಆಳವಡಿಸಲಾಗಿರುವ ಪಕ್ಷಿಕೆರೆ ಹೆಸರಿನ ತುಳು ಲಿಪಿಯ ನಾಮಫಲಕದ ಅನಾವರಣ ಕಾರ್ಯಕ್ರಮ ನಡೆಯಿತು.

ಈ ಕಾರ್ಯದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಪಿ.ಡಿ.ಒ ಅರುಣ್ ಪ್ರದೀಪ್ ಡಿಸೋಜ ರವರು ನಾಮಫಲಕವನ್ನು ಉದ್ಘಾಟಿಸಿದರು, ಜೈ ತುಳುನಾಡ್ (ರಿ.) ಸ್ಥಾಪಕ ಸಮಿತಿ ಸದಸ್ಯರಾದ ಕಿರಣ್ ತುಳುವ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ನಾರಾಯಣ ಕುಂದರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಪಕ್ಷಿಕೆರೆ, ಇದರ ಅಧ್ಯಕ್ಷರಾದ ಗಣಪತಿ ಆಚಾರ್ಯ, ಧನಂಜಯ್ ಪಿ ಶೆಟ್ಟಿಗಾರ್ ಗೌರವಧ್ಯಕ್ಷರು ಶ್ರೀ ವಿನಾಯಕ ಮಿತ್ರ ಮಂಡಳಿ, ಶ್ರೀಮತಿ ಧನಲಕ್ಷ್ಮಿ ಡಿ ಶೆಟ್ಟಿಗಾರ್ ಅಧ್ಯಕ್ಷರು ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ, ಮಂಡಳಿಯ ಅಧ್ಯಕ್ಷರಾದ ಧನರಾಜ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಶೆಟ್ಟಿಗಾರ್, ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪಾರ್ವತಿ ಹಾಗೂ ಜಂಟಿ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here