ದಾವಣಗೆರೆ: ದಾವಣಗೆರೆಯ ಓಂ ಚಂಡಿಕಾ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಮೇ. 17, 18 ಶನಿವಾರ, ಭಾನುವಾರ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ 11-30 ರವರೆಗೆ ಮಧುಮೇಹ ನಿರ್ಮೂಲನ ಅಂದೋಲನ ಕಾಸ್ಮಿಕ್ ಹೀಲಿಂಗ್ ಥೆರಪಿ ಚಿಕಿತ್ಸಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಅಘೋರಿ ಚಿದಂಬರ ಯೋಗಿಯವರು ತಿಳಿಸಿದ್ದಾರೆ.
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಡೆಯುವ ಈ ಮಹತ್ವಪೂರ್ಣ ಶಿಬಿರ ದಾವಣಗೆರೆಯ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಹಿಂಭಾಗ ಭರತ್‌ಸಿಂಗ್ ನಗರದ 1ನೇ ಮುಖ್ಯ ರಸ್ತೆ, 3ನೇ ತಿರುವಿನಲ್ಲಿ ಇರುವ ಚಂಡಿಕಾಶ್ರಮದ ಸಭಾಂಗಣದಲ್ಲಿ ನಡೆಯುವ ಈ ಶಿಬಿರದಲ್ಲಿ ಭಾಗವಹಿಸುವವರು ನೊಂದಣಿಗಾಗಿ ಹೆಚ್ಚಿನ ಮಾಹಿತಿಗಾಗಿ 9380389236 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

