ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆ

0
10

ನಿವೃತ್ತಿಯ ತರುವಾಯವೂ ಸಂತೋಷದಿಂದ ಹೇಗಿರುತ್ತಾರೆ ಎನ್ನುವುದನ್ನು ತಿಳಿಯಲು ಬಂದಿರುವೆ. ಇಲ್ಲಿರುವವರು ಖುಷಿಯಿಂದ ಇರುವುದು ಕಂಡು ಬಹಳ ಸಂತೋಷವಾಗುತ್ತಿದೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳನ್ನು ಅಧ್ಯಕ್ಷ ಯುವರಾಜ್ ಜೈನ್ ನುಡಿದರು.

ಅವರು ಏಪ್ರಿಲ್ 18ರಂದು ಸಮಾಜ ಮಂದಿರದಲ್ಲಿ ನಡೆದ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಂಘದ ಅಧ್ಯಕ್ಷ ಟಿ ಎನ್ ಕೆಂಬಾರೆ ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ರಾಜ್ಯ ಸಂಘದ ಜಿಲ್ಲಾಧ್ಯಕ್ಷ ಬಿ ಎಂ ರಾಜಗೋಪಾಲ್, ಕಾರ್ಯದರ್ಶಿ ಎಲ್ ಜೆ ಫೆನಾಂಡಿಸ್, ಉಪಾಧ್ಯಕ್ಷೆ ಪ್ರೇಮಾ ರಾವ್, ಕೋಶಾಧಿಕಾರಿ ರಾಜೀವ್ ಎಸ್, ರಾಜಾರಾಮ್ ನಾಗರಕಟ್ಟೆ ಹಾಜರಿದ್ದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಅಧ್ಯಕ್ಷರಾಗಿ ಪ್ರೇಮ ಸಿ ರಾವ್, ಉಪಾಧ್ಯಕ್ಷರಾಗಿ ಅನಂತ ಪದ್ಮನಾಭ, ಕಾರ್ಯದರ್ಶಿಯಾಗಿ ಪದ್ಮನಾಭ, ಜತೆ ಕಾರ್ಯದರ್ಶಿಯಾಗಿ ಶಾಲಿನಿ, ಕೋಶಾಧಿಕಾರಿಯಾಗಿ ದಿನೇಶ್ ಭಂಡಾರ್ಕರ್ ಆಯ್ಕೆಯಾದರು.

ಸೀನ ನಾಯಕ್ ಸ್ವಾಗತಿಸಿದರು. ಪ್ರೇಮರಾವ್ ವರದಿ ವಾಚಿಸಿದರು. ರಾಜೀವ್ ಲೆಕ್ಕ ಪತ್ರ ಮಂಡಿಸಿದರು. ರಾಜು ಪೂಜಾರಿ ಹಾಗೂ ಇಂದುಶೇಖರ್ ಅವರನ್ನು ಸನ್ಮಾನಿಸಲಾಯಿತು. ಸದಾಶಿವ ರೈ ಬಹುಮಾನಿತರ ಪಟ್ಟಿ ವಾಚಿಸಿದರು. ಪದ್ಮನಾಭ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here