ಮೂಡುಬಿದಿರೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ

0
45

ಮೂಡುಬಿದಿರೆ : ಪೆರಿಂಜೆ ಗ್ರಾಮದ ಬಳಿ ಸ್ಥಳೀಯ 6 ವರ್ಷದ ಮಗುವಿನ ಮೇಲೆ 2 ಜನರಿಂದ ಸತತ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಲಭಿಸಿದ್ದು, ವೇಣೂರು ಪೊಲೀಸ್ ತನಿಖೆಯಲ್ಲಿ ದೂರು ನೀಡಲಾಗಿದೆ ಎಂದು ಮಾಹಿತಿ ಲಭಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸ್ ಬಂಧಿಸಿದ್ದು , ಇನ್ನೊಬ್ಬ ಆರೋಪಿ ಮುಂಬಯಿ ನಗರಕ್ಕೆ ಪರಾರಿಯಾಗಿದ್ದಾನೆ ಎಂದು ಮಾಹಿತಿ ಲಭಿಸಿದೆ.

ಮೊಬೈಲ್ ಫೋನ್ ಗೆಳೆಯನಿಗೆ ನೀಡಿದ ಸಮಯದಲ್ಲಿ ಅದರಲ್ಲಿ ಸೆರೆ ಹಿಡಿಯಲಾದ ದೃಶ್ಯಾವಳಿಗಳನ್ನು ಗಮನಿಸಿ ಸ್ನೇಹಿತನಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಪ್ರಸ್ತುತ ದೂರು ನೀಡಿದಾತನ ಮೇಲೆ ಕೊಲೆ ಬೆದರಿಗೆ ಮತ್ತು ಮನೆಯವರನ್ನು ಅತ್ಯಾಚಾರ ಮಾಡುವುದಾಗಿ ಆರೋಪಿಗಳು ಫೋನ್ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here