40 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..!

0
57

ಆರೋಗ್ಯ ಸುರಕ್ಷತೆಗೆ ಸರ್ಕಾರದ ಹೆಜ್ಜೆ ..!

ಮಂಗಳೂರು : ರಾಜ್ಯ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 40 ವರ್ಷ ವಯಸ್ಸು ಮೀರಿದ ಹಾಗೂ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (Opt-in) ಅಡಿಯಲ್ಲಿ ನೋಂದಾಯಿತವಾಗಿರುವ ನೌಕರರಿಗೆ ವರ್ಷಕ್ಕೊಮ್ಮೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ (Annual Health Checkup) ಸೌಲಭ್ಯ ಒದಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಆದೇಶ ಹೊರಡಿಸಿದೆ.

ಆಧುನಿಕ ಜೀವನಶೈಲಿ, ಕೆಲಸದ ಒತ್ತಡ ಹಾಗೂ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ಈ ‘ಪ್ರಿವೆಂಟಿವ್ ಹೆಲ್ತ್ ಚೆಕಪ್’ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗಿದೆ.

ಯಾವೆಲ್ಲಾ ಪರೀಕ್ಷೆಗಳು ಲಭ್ಯ?

ಈ ಯೋಜನೆಯಡಿ ನೌಕರರು ಸಂಪೂರ್ಣ ನಗದು ರಹಿತ (Cashless) ಸೇವೆಯ ಮೂಲಕ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಪಡೆಯಬಹುದು.

🔹 ಸಾಮಾನ್ಯ ಪರೀಕ್ಷೆಗಳು: ರಕ್ತದೊತ್ತಡ (BP), ನಾಡಿಮಿಡಿತ, ತೂಕ, BMI, ಉಸಿರಾಟದ ದರ.

🔹 ವೈದ್ಯಕೀಯ ಪರೀಕ್ಷೆಗಳು: ಹೃದಯ, ಶ್ವಾಸಕೋಶ, ಹೊಟ್ಟೆ, ನರಮಂಡಲ, ದಂತ ಹಾಗೂ ಕಣ್ಣಿನ ಪರೀಕ್ಷೆ.

🔹 ಪ್ರಮುಖ ಲ್ಯಾಬ್ ಪರೀಕ್ಷೆಗಳು: ಹಿಮೋಗ್ಲೋಬಿನ್, ಮೂತ್ರ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಲಿವರ್ ಫಂಕ್ಷನ್ ಟೆಸ್ಟ್ (LFT), ಕಿಡ್ನಿ ಫಂಕ್ಷನ್ ಟೆಸ್ಟ್ (KFT), ಥೈರಾಯ್ಡ್ (TSH) ಪರೀಕ್ಷೆ.

🔹 ವಿಶೇಷ ಪರೀಕ್ಷೆಗಳು: ECG, ಎಕ್ಸ್-ರೇ, ಸಂಪೂರ್ಣ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್, ಪುರುಷರಿಗೆ PSA ಟೆಸ್ಟ್ ಹಾಗೂ ಮಹಿಳೆಯರಿಗೆ ಮ್ಯಾಮೊಗ್ರಾಮ್ ಮತ್ತು PAP Smear ಪರೀಕ್ಷೆಗಳು.

ಮುಖ್ಯ ಷರತ್ತುಗಳು

40 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಗೆ Opt-in ಆಗಿರುವ ನೌಕರರಿಗೆ ಮಾತ್ರ ಅನ್ವಯ.

ಯೋಜನೆಯಿಂದ Opt-out ಆಗಿರುವ ನೌಕರರು ಈ ಸೌಲಭ್ಯಕ್ಕೆ ಅರ್ಹರಲ್ಲ.

ನೌಕರರಿಗೆ ಮಾತ್ರ ಸೌಲಭ್ಯ; ಕುಟುಂಬದ ಅವಲಂಬಿತ ಸದಸ್ಯರಿಗೆ ಅನ್ವಯಿಸುವುದಿಲ್ಲ.

ಸರ್ಕಾರಿ ಆಸ್ಪತ್ರೆಗಳು ಹಾಗೂ KASS ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪರೀಕ್ಷೆ ಮಾಡಿಸಬೇಕು.

ಪುರುಷ ನೌಕರರಿಗೆ ಗರಿಷ್ಠ ₹2,000 ಹಾಗೂ ಮಹಿಳಾ ನೌಕರರಿಗೆ ₹2,200 ವೆಚ್ಚದ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ.

ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಈ ಆದೇಶ ಜಾರಿಗೊಂಡಿದ್ದು, ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗೆ ಇದು ಮಹತ್ವದ ಹೆಜ್ಜೆಯಾಗಿದೆ.

LEAVE A REPLY

Please enter your comment!
Please enter your name here