ವಿರಾಜಪೇಟೆ : ದೀಪಾವಳಿ ಹಬ್ಬದ ಪ್ರಯುಕ್ತ ನಾಪೋಕ್ಲು ಮಂಡಲದ ವಿವಿಧ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿಯ ಪ್ರಸಿದ್ಧ ಶ್ರೀ ಭಗವತಿ ದೇವಾಲಯದಲ್ಲಿ ಗೋ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಹಾಗೂ ಮಾತೃ ಶಕ್ತಿ ನಾಪೋಕ್ಲು ಘಟಕದ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗೋವುಗಳಿಗೆ ವಿಶೇಷ ಆರಾಧನೆ ಸಲ್ಲಿಸಿ, ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ದೇವಾಲಯದ ಅರ್ಚಕರಾದ ಹರೀಶ್ ಭಟ್ ಅ ಅವರು ವಿಶೇಷ ಪೂಜೆಯನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಪೂವಮ್ಮ, ಮಡಿಕೇರಿ ತಾಲೂಕು ಬಜರಂಗದಳ ಸಂಚಾಲಕ ರಾಧಾಕೃಷ್ಣ ರೈ, ಪ್ರಮುಖರಾದ ಕಂಗಡ ಜಾಲಿ ಪೂವಪ್ಪ, ಶಿವಚಳಿಯಂಡ ಅಂಬಿ ಕಾರ್ಯಪ್ಪ, ಉಮಾ ಪ್ರಭು, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಶಿವಚಳಿಯಂಡ ದೇವಕಿ, ಬೊಪ್ಪಂಡ ಜಾನಕಿ ಕುಶಾಲಪ್ಪ, ನಾಟೊಳಂಡ ಕಸ್ತೂರಿ, ಬಿಂದು ಸುಬ್ಬಯ್ಯ, ಸಚಿನ್, ಪುಷ್ಪ, ಕಾವೇರಿಮನೆ ಭರತ್, ಬೋಳಕರಂಡ ಸೋಮಣ್ಣ, ಕಿರಣ್, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ

