
ಅಳಿಯೂರು: ಮಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ (ಮೈಟ್) ಕಾಲೇಜಿನ ವಿದ್ಯಾರ್ಥಿಗಳಿಂದ ವಿನ್ಯಾಸ ಚಿಂತನಾ ಕಾರ್ಯಾಗಾರವು ಸೆ. 2 ಮತ್ತು 3ರಂದು ಅಳಿಯೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ ವಿ. ಕಾರ್ಯಾಗಾರಕ್ಕೆ ಶುಭ ಕೋರಿದರು. ಮೈಟ್ ಕಾಲೇಜಿನ 54 ಮಂದಿ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಳಿಯೂರು ಪ್ರೌಢಶಾಲೆಯ 158 ವಿದ್ಯಾರ್ಥಿಗಳಿಗೆ ವಿನ್ಯಾಸ ಚಿಂತನೆಯಲ್ಲಿ ಸೃಜನಾತ್ಮಕ ಪ್ರಕ್ರಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ತರಬೇತಿ ನೀಡಿದರು. ಮೈಟ್ ಕಾಲೇಜಿನ ಸಹಾಯಕ ಪ್ರೊಫೆಸರ್ ಶ್ರೀಮತಿ ಶೈಲಾ ಸಿಕ್ವೇರಾ ಮತ್ತು ಶ್ರೀಮತಿ ಸೌಜನ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮಕ್ಕಳಲ್ಲಿ ಕ್ರಿಯಾತ್ಮಕತೆ, ಹೊಸ ಹೊಸ ಯೋಚನೆ ಹಾಗೂ ಶೈಕ್ಷಣಿಕ ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.
