
ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾತೃ ಮಂಡಳಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಹೆಣ್ಣು ಸಂಸಾರದ ಕಣ್ಣು, ಮನೆ ಮನಗಳನ್ನು ಬೆಳಗುವ ದೇವತೆ. ಅಂತಹ ಮಾತೃ ಸ್ವರೂಪಿಯಾದ ತಾಯಿಯಿಂದಲೇ ದೇಶ ರಕ್ಷಣೆಯು ಸಾಧ್ಯ ಎಂದು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಟಿ.ಜಿ.ಪಾಂಡುರಂಗ ಪೈ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೈಲೇಶ್ ಕಿಣಿ ಶುಭ ಹಾರೈಸಿದರು.
ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಪಿ.ಡಿ.ಓ ಶ್ರೀಧರ ಕಾಮತ್, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ವಿದ್ಯಾಲಯದ ಅಧ್ಯಕ್ಷೆ ನಾಗರತ್ನ, ವಿದ್ಯಾಕೇಂದ್ರದ ಅಧ್ಯಕ್ಷೆ ಸೋನಿಯಾ ಶೆಟ್ಟಿ ಉಪಸ್ಥಿತರಿದ್ದರು.

ಮಮತಾ ಕರಬ ನಿರೂಪಿಸಿ, ಆಶಾ ಪ್ರಾರ್ಥಿಸಿದರು. ಚೈತನ್ಯ ಸ್ವಾಗತಿಸಿ, ಶ್ರೀದೇವಿ ವಂದಿಸಿದರು. ಮಾತೃ ಭಾರತಿ ಪ್ರಮುಖ್ ಮೀನಾಕ್ಷಿ ಮಾತಾಜಿ , ಶಿಕ್ಷಕಿ ಐಶ್ವರ್ಯ ಲಕ್ಷ್ಮಿ ಮತ್ತು ಮಾತೃ ಮಂಡಳಿಯ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
