ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಹೈಕೋರ್ಟ್ ಪೀಠ ಸ್ಥಾಪನೆ ಮಾಬೇಕೆಂಬ ಬಹುದಿನಗಳ ಹೋರಾಟಕ್ಕೆ ಪೂರಕವಾಗಿ ಸಂಚಾರಿ ಪೀಠವನ್ನು ಸ್ಥಾಪಿಸಿ ಹೈಕೋರ್ಟ್ ಪೀಠದ ಮೊದಲ ಹೆಜ್ಜೆ ಇಡಬೇಕಾಗಿರುವುದರಿಂದ ಸಂಚಾರಿ ಪೀಠಕ್ಕೆ ಬೇಕಾಗುವ ಮೂಲಭೂತ ಸೌಕರ್ಯವಾದ ನ್ಯಾಯಾಲಯದ ಹಾಲ್, ನ್ಯಾಯಾಧೀಶರಿಗೆ ಬೇಕಾ ವಸತಿ ಗೃಹ, ಕಛೇರಿಗೆ ಸ್ಥಳವಕಾಶ ಒದಗಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಹಳೆಯ ಜಿಲ್ಲಾಧಿಕಾರಿ ಕಛೇರಿ ಮತ್ತು ನ್ಯಾಯಾಧೀಶರುಗಳಿಗೆ ವಸತಿ ವ್ಯವಸ್ಥೆ ಬಗ್ಗೆ ಸ್ಥಳವಕಾಶ ಮೀಸಲಿಡುವಂತೆ ತಿಳಿಸಲಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಲಿದ್ದು, ಕೂಡಲೇ ಉಚ್ಚ ನ್ಯಾಯಾಲಯ ಸಮಿತಿಯೊಂದು ಜಿಲ್ಲೆಗೆ ಭೇಟಿ ನೀಡಿ, ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಜೇಶ್ ರೈ ಮತ್ತು ಹೆಚ್.ಟಿ. ನರೇಂದ್ರ ಪ್ರಸಾದ , ದ.ಕ ಜಿಲ್ಲಾಡಳಿತ ನ್ಯಾಯಾಮೂರ್ತಿಗಳು ಇವರಿಗೆ ಭೇಟಿ ಮಾಡಿ, ಸಂಚಾರಿ ಪೀಠ ಸ್ಥಾಪನೆಯ ಬಗ್ಗೆ ಇರುವ ಅಗತ್ಯತೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿವರವಾಗಿ ತಿಳಿಸಲಾಯಿತ್ತು.
ಅಲ್ಲದೇ ಮುಖ್ಯನ್ಯಾಯಾಮೂರ್ತಿಗಳಿಗೆ, ನ್ಯಾಯಮೂರ್ತಿಗಳ ಮುಖಾಂತರ ಹೋರಾಟ ಸಮಿತಿಯು ಮನವಿ ಸಲ್ಲಿಸಲಾಯಿತ್ತು ಎಂದು ವಿಧಾನ ಪರಿಷತ್ತಿನ ಶಾಸಕರು, ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟ ಸಮಿತಿಯ ಸಂಚಾಲಕರಾದ ಐವನ್ ಡಿʼಸೋಜಾ ರವರು ತಿಳಿಸಿದರು.

ಈ ಬಗ್ಗೆ ನ್ಯಾಯಾಮೂರ್ತಿಯವರು ಉತ್ತಮ ಪ್ರತಿಕ್ರಿಯೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಬೇಕಾದ ಕ್ರಮಕೈಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿʼಸೋಜಾ ರವರು ತಿಳಿಸಿದ್ದಾರೆ.

