ಮಂಗಳೂರು: ಇಲ್ಲಿನ ಸುರತ್ಕಲ್ ಸಮೀಪದ ಕಾನ ಎಂಬಲ್ಲಿನ ನಿವಾಸಿ ಸಮಾಜ ಸೇವಕ “ಅಬ್ದುಲ್ ಜಬ್ಬಾರ್ ಜನತಾ ಕಾಲೋನಿ” ಅವರಿಗೆ ಅಕ್ಟೋಬರ್ 24ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಅಮೆರಿಕಾದ ಶಿಕ್ಷಣ ಸಂಸ್ಥೆಯೊಂದರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ, ಜಬ್ಬಾರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಮೆರಿಕನ್ ವಿಶ್ಡೊಂ ಪೀಸ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದೆ.

ಮಂಗಳೂರು ತಾಲೂಕಿನ ಸುರತ್ಕಲ್ ಕಾನ ಸಮೀಪದ ಜನತಾ ಕಾಲೋನಿಯಲ್ಲಿ ಸೇಕಬ್ಬ ಮತ್ತು ಬೀಫಾತುಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದ ಜಬ್ಬಾರ್ ಅವರು ಬಾಲ್ಯದಿಂದಲೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡು ತನ್ನ ಯೌವನದ ದಿನಗಳಲ್ಲಿಯೇ ಸಕ್ರಿಯವಾಗಿ ಸದಾ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆಗಳನ್ನು ನೀಡಿರುತ್ತಾರೆ.
ಪ್ರಸ್ತುತ ಕಾಯಕದಲ್ಲಿ ಮತ್ಸ್ಯ ಉದ್ಯಮಿ ಆಗಿರುವ ಇವರು, ಈಗಲೂ ಕೂಡ ಕಷ್ಟ ಎಂದು ಕೇಳಿಕೊಂಡು ಬಂದವರಿಗೆ ಜಾತಿ, ಧರ್ಮ, ಪಕ್ಷ, ಎಂಬ ಬೇದವಿಲ್ಲದೆ ಆರ್ಥಿಕವಾಗಿ ತಮ್ಮಲ್ಲಾದ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತಿದ್ದಾರೆ, ಇಂತಹ ಸಮಾಜ ಸೇವಕನಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನವಾಗಿದ್ದು, ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವರದಿ: ಅದ್ದಿ ಬೊಳ್ಳೂರು

