ಕೊಡಿಯಾಲ್ ಬೈಲಿನ ಪ್ರದೇಶದಲ್ಲಿ ಮನೆ ಸಂಪೂರ್ಣವಾಗಿ ನಾಶ : ಐವನ್ ಡಿಸೋಜರವರು ಭೇಟಿ

0
70

ಮಂಗಳೂರು ನಗರದ ಕೊಡಿಯಾಲ್ ಬೈಲಿನ ಪ್ರದೇಶದಲ್ಲಿ ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು  ಈ ಪ್ರದೇಶಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರು ಭೇಟಿ ನೀಡಿ ಕೂಡಲೇ ಸಂಪೂರ್ಣ ಬಿದ್ದ ಮನೆಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ವಿನಂತಿ.

ಮಂಗಳೂರು ನಗರದ ಕೊಡಿಯಾಲ್ ಬೈಲಿನಲ್ಲಿ ಒಂದು ಮನೆಯ ಸಂಪೂರ್ಣ ನಾಶವಾಗಿದ್ದು ಸದರಿ ಪ್ರದೇಶಕ್ಕೆ ವಿಧಾನಪರಿಷತ್ ಶಾಸಕರಾದ ಐವನ್ ಡಿಸೋಜರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ  ಗ್ರಾಮ ಲೆಕ್ಕಾಧಿಕಾರಿ ಮತ್ತು ತಹಶೀಲ್ದಾರ್ ರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕೃತಿ ವಿಕೋಪದಲ್ಲಿ ನೀಡಬೇಕಾದ ಅನುದಾನವನ್ನು ಕೂಡಲೇ ನೀಡಬೇಕೆಂದು ಅವರ ಕುಟುಂಬಕ್ಕೆ ವಾಸಿಸಲು ವ್ಯವಸ್ಥೆ ಮಾಡಬೇಕೆಂದು ಪಾಲಿಕೆ ಕಮಿಷನರ್ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದೇ ರೀತಿ ಈ ಭಾಗದಲ್ಲಿ ಕೃತಕ ನೆರೆಗಳಿಂದ ಉಂಟಾದ ನಷ್ಟದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ ಹಾಗೂ ಅದೇ ರೀತಿ ಗ್ರಾಮ ಲೆಕ್ಕಾಧಿಕಾರಿಯೂ ಈ ವರದಿಯ ಬಗ್ಗೆ ನಿರ್ಲಕ್ಷ  ವಹಿಸಿದ್ದರೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.

        ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪ್ರಕಾಶ್.ಬಿ.ಸಾಲಿಯನ್,ಮ.ನಾ.ಪಾ ಮಾಜಿ ನಾಮ ನಿರ್ದೇಶನ ಸದಸ್ಯರು ಪ್ರೇಮ್ ಬಳ್ಳಾಲ್ ಬಾಗ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರು ದಿನೇಶ್ ಮೂಳೂರು ರವಿ ಸುಂಕದಕಟ್ಟೆ, ಕಾಂಗ್ರೆಸ್ ನಾಯಕರಾದ ಸುನಿಲ್ ಕುಮಾರ್ ಬಜಿಲಕೇರಿ, ದಿನೇಶ್ ಶಿವನಗರ ಹಾಗೂ ಕೊಡಿಯಲ್ ಬೈಲ್ ವಾರ್ಡಿನ ಸದಸ್ಯರುಗಳು  ಜೊತೆಗಿದ್ದರು.    ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪ್ರಕಾಶ್.ಬಿ.ಸಾಲಿಯನ್,ಮ.ನಾ.ಪಾ ಮಾಜಿ ನಾಮ ನಿರ್ದೇಶನ ಸದಸ್ಯರು ಪ್ರೇಮ್ ಬಳ್ಳಾಲ್ ಬಾಗ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರು ದಿನೇಶ್ ಮೂಳೂರು ರವಿ ಸುಂಕದಕಟ್ಟೆ, ಕಾಂಗ್ರೆಸ್ ನಾಯಕರಾದ ಸುನಿಲ್ ಕುಮಾರ್ ಬಜಿಲಕೇರಿ, ದಿನೇಶ್ ಶಿವನಗರ ಹಾಗೂ ಕೊಡಿಯಲ್ ಬೈಲ್ ವಾರ್ಡಿನ ಸದಸ್ಯರುಗಳು  ಜೊತೆಗಿದ್ದರು.

LEAVE A REPLY

Please enter your comment!
Please enter your name here