ಅತಿಯಾದ ಮಳೆಯಿಂದ ಉಂಟಾದ  ಕೃತಕ ನೆರೆಯಿಂದ ಮನೆಗಳಿಗೆ ನೀರು ನುಗ್ಗಿ ಮನೆಗಳು ಕುಸಿದ ಪ್ರದೇಶಗಳಿಗೆ ಐವನ್ ಡಿಸೋಜಾ ಭೇಟಿ ಕಾಳಜಿ ಕೇಂದ್ರದಲ್ಲಿ ಇರುವಂತೆ ನಿವಾಸಿಗಳಿಗೆ ಒತ್ತಾಯ

0
70

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆಯಲ್ಲಿ ನಿನ್ನೆ ಸುರಿದ ಮಳೆಯಿಂದ ಕೃತಕ ನೆರೆ ಉಂಟಾಗಿದ್ದು ಮನೆಗಳಿಗೆ ನೀರು ನುಗ್ಗಿ ಮನೆಗಳ ಸ್ವತ್ತುಗಳ ನಾಶವಾದ ಬಗ್ಗೆ ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಇಂಜಿನಿಯರ್ ಜೊತೆ ಸಂವಾದ ನಡೆಸಿ ಸೂಕ್ತ ವ್ಯವಸ್ಥೆಯನ್ನು ಮಾಡಲು ಒತ್ತಾಯಿಸಿದರು ಮಾತ್ರವಲ್ಲದೆ ಶಿವನಗರದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ಜನರನ್ನು ಗಂಜಿ ಕೇಂದ್ರಕ್ಕೆ ಬರುವಂತೆ ಸಲಹೆ ನೀಡಿದ್ದಾರೆ ಅಲ್ಲದೆ ಶಿವನಗರದ ಪ್ರದೇಶದಲ್ಲಿ ಪ್ರತಿಸಲ ಕೃತಕ ನೆರೆ ಉಂಟಾಗುತ್ತಿದ್ದು ತೋಡುಗಳಲ್ಲಿ  ಹರಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಸರಿ ಪಡಿಸುವ ಅವಶ್ಯಕತೆ ಇದೆ ಎಂದು ಆಯುಕ್ತರು ಮತ್ತು ನಗರ ಪಾಲಿಕೆ ಇಂಜಿನಿಯರ್ ಗಳಿಗೆ ಮನವರಿಕೆ ಮಾಡಲಾಗಿದೆ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶಿವ ನಗರದಲ್ಲಿ ಅನೇಕ ಮನೆಗಳಲ್ಲಿ ನೀರು ತುಂಬಿ ಉಂಟಾದ ನಷ್ಟಕ್ಕೆ ಕಳೆದ ಬಾರಿಯೂ ಸರಿಯಾದ ಪರಿಹಾರ ನೀಡದೆ ಇರುವುದು ಶಿವನಗರ ನಿವಾಸಿಗಳು  ಐವನ್ ಡಿ’ಸೋಜಾರವರ ಗಮನಕ್ಕೆ ತಂದಿದ್ದಾರೆ, ಈ ಬಗ್ಗೆ ಕೂಡಲೇ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಕೂಡದು ಎಂದು ಕಮಿಷನರ್ ಮತ್ತು ತಹಶೀಲ್ದಾರ್ ಗೆ ವಿನಂತಿಸಿದ್ದಾರೆ ಬಡವರಿಗೆ ಮತ್ತು ತೊಂದರೆಗೊಳಗಾದವರಿಗೆ ಸರ್ಕಾರದ ವತಿಯಿಂದ ನೀಡಬೇಕಾದ ಎಲ್ಲಾ ಪರಿಹಾರವನ್ನು ನೀಡುವಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷವನ್ನು ವಹಿಸಕೂಡದು ಎಂದು ಜಿಲ್ಲಾಧಿಕಾರಿಯಾಗಿ ತಹಶೀಲ್ದಾರ್ ರವರಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಸದಾಶಿವ ಕುಲಾಲ್, ಮಾಜಿ ಮನಪಾ ಸದಸ್ಯರಾದ ಭಾಸ್ಕರ್ ರಾವ್, ಮಾಜಿ ನಾಮ ನಿರ್ದೇಶನ ಸದಸ್ಯರು ಮ.ನಾ.ಪಾ ಪ್ರೇಮ್ ಬಳ್ಳಾಲ್ ಬಾಗ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರು ದಿನೇಶ್ ಮೂಳೂರು, ರವಿ ಸುಂಕದಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here