ಪಡುಕುಡೂರು ಶಾಲೆಯಲ್ಲಿ ಹೈಟೆಕ್‌ ಮಾದರಿಯ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ – ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ.

0
163


ಪಡುಕುಡೂರು : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್‌ ಮಾದರಿಯ ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನೆ, ಶಾಲೆಯ ಔಷಧಿಯ ವನ, ವಿವಿಧ ಕೊಡುಗೆಗಳ ಹಸ್ತಾಂತರ ಹಾಗೂ ಲೋಕಾರ್ಪಣೆ ಇತ್ತೀಚೆಗೆ ನಡೆಯಿತು.
ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್‌ ಮಾತನಾಡಿ ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ವಿಶೇಷ ಸಹಕಾರ ನೀಡುತ್ತಿರುವ ಮುಂಬೈ ಉದ್ಯಮಿ ಪಡುಪರ್ಕಳ ಹರೀಶ ಶೆಟ್ಟಿ, ಮುನಿಯಾಲು ಲಯನ್ಸ್‌ ಕ್ಲಬ್‌ ಪಡುಕುಡೂರು ಅಶೋಕ್‌ ಎಂ ಶೆಟ್ಟಿ ಅವರ ಕೊಡುಗೆಯನ್ನು ಸ್ಮರಿಸಿದರು.
ಶಾಲೆಯ ಅಭಿವೃದ್ಧಿಗೆ ವಿವಿಧ ಕೊಡುಗೆ ನೀಡಿದ ಜಯಂತಿ ಹೆಗ್ಡೆ, ಸುಕೇಶ ಶೆಟ್ಟಿ, ನಾಗೇಶ ಆಚಾರ್ಯ, ಸುಂದರಿ ಪೂಜಾರಿ, ಯಶ್‌ ಅಜಿಲ ಮುನಿಯಾಲು, ರಿತೇಶ ಶೆಟ್ಟಿ ಖಜಾನೆ, ಅಡುಗೆ ಸಹಾಯಕಿ ಪುಪ್ಪಾ, ಪ್ರಸನ್ನ ಶೆಟ್ಟಿ ಜಯಲೀಲಾ, ರವಿ ಶೆಟ್ಟಿ, ಹರೀಶ ಪೂಜಾರಿ, ಸುನೀಲ್‌ ಹಿರಿಯಡ್ಕ, ವಿವಿಧ ಸಂಘಸಂಸ್ಥೆಯ ಪ್ರಮುಖರನ್ನು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶ್ರೀ ಮಹಾಗಣಪತಿ ಮಹಿಳಾ ಸಂಘದ ಸದಸ್ಯರು ಸಹಿತ ಹಲವರನ್ನು ಗೌರವಿಸಲಾಯಿತು.
ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ, ಅಧ್ಯಕ್ಷ ಸಂದೀಪ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್‌, ಮುನಿಯಾಲು ಲಯನ್ಸ್‌ ಕ್ಲಬ್‌ ಪೂರ್ವಾಧ್ಯಕ್ಷ ಟಿ.ಭುಜಂಗ ಶೆಟ್ಟಿ ಪಡುಕುಡೂರು, ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ, ಮುಖಂಡ ಮುನಿಯಾಲು ಶಂಕರ ಶೆಟ್ಟಿ ಪಡುಕುಡೂರು, ಪಡುಪರ್ಕಳ ಶಂಕರ ಶೆಟ್ಟಿ, ಡಾ.ಕೆ.ಸುದರ್ಶನ್‌ ಹೆಬ್ಬಾರ್‌ ಮುನಿಯಾಲು, ಪಡುಕುಡೂರು ಡೈರಿ ಅಧ್ಯಕ್ಷ ಜಗದೀಶ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಅಶೋಕ್‌ ಎಂ ಶೆಟ್ಟಿ, ಮುನಿಯಾಲು ಸೀತಾರಾಮ ಕಡಂಬ, ಪಂಚಾಯಿತಿ ಸದಸ್ಯೆ ತಾರಾವತಿ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವೀಚಾರಕಿ ಸುಮಲತಾ, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕಿಯರು, ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಪದಾಧಿಕಾರಿಗಳು, ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.
ಹರೀಶ ಪೂಜಾರಿ ಎಸ್‌ ಸ್ವಾಗತಿಸಿದರು.

LEAVE A REPLY

Please enter your comment!
Please enter your name here