ವೈಚಾರಿಕ ಸಾಹಿತಿ ಶಿಕ್ಷಕ ಸುಭಾಷ್ ಚವ್ಹಾಣರವರಿಗೆ ಜೆಂಟ್ಸ್ ಗ್ರೂಪ್‌ ನಿಂದ ಸನ್ಮಾನ

0
164

ಹುಬ್ಬಳ್ಳಿ : ಶಹರದ ಬಸವೇಶ್ವರ ನಗರದಲ್ಲಿರುವ “ಶ್ರೀ ಸಮರ್ಥ” ನಿವಾಸದಲ್ಲಿ ಜೈಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ನಿಂದ ಜೈಂಟ್ಸ್ ವೆಲ್ ಫೇರ್ ಫೌಂಡೇಶನ್ ಅವರು ಪ್ರತಿ ವರ್ಷದಂತೆ ಈ ವರ್ಷವು 23 ಸಪ್ಟೆಂಬರ್ 2023ರಂದು ಹಮ್ಮಿಕೊಂಡಿದ್ದ ಸಮಾಜಪರ ಸೇವಾ ಕಾರ್ಯಗಳ ಜೈಂಟ್ಸ್ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕಿಯಾಶೀಲ ಗುರುಗಳು, ವೈಚಾರಿಕ ಸಾಹಿತಿಗಳಾದ ಶ್ರೀ ಸುಭಾಷ್ ಹೇಮಣ್ಣಾ ಚವ್ಹಾಣ ಮತ್ತು ಹಿರಿಯ ಲೇಖಕಿ ಪದ್ಮಜಾ ಉಮರ್ಜಿಯವರನ್ನು ಸನ್ಮಾನಿಸಲಾಯಿತು.

ಹುಬ್ಬಳ್ಳಿ ಶಹರದ ಮಂಜುನಾಥ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದುಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯೊಂದಿಗೆ ಸುಭಾಷ್ ರವರು ಮಾಡಿರುವ ದ್ವಿ ದಶಕಗಳ ಔಚಿತ್ಯ ಪೂರ್ಣ ಕನ್ನಡ ನಾಡು ನುಡಿ ಸಾಹಿತ್ಯ ಸೇವೆ, ಹವ್ಯಾಸಿ ವರದಿಗಾರರಾಗಿ ನೂರಾರು ಸ್ವಾರಸ್ಯಕರ ಶಿಕ್ಷಣ, ಸಾಹಿತ್ಯ, ಮಕ್ಕಳ ಸಾಧನೆ ಪರ ಪತ್ರಿಕಾ ವರದಿಗಳ ಪ್ರಕಟಣೆ, ಹಲವಾರು ಮಹತ್ವಪೂರ್ಣ ರಾಜ್ಯ ವ ಪ್ರಾದೇಶಿಕ ಕಾರ್ಯಕ್ರಮಗಳ ಅರ್ಥಪೂರ್ಣ ನಿರೂಪಣೆಯನ್ನು ಅವಲೋಕಿಸಿ ಹುಬ್ಬಳ್ಳಿಯ ಮಕ್ಕಳ ಚಾಚಾ ಶಿಕ್ಷಣ ವ ಸಾಹಿತ್ಯ ಪ್ರೇಮಿ, ಇನ್ – ಚಾರ್ಜ್ ಫಾರ್ಮೆರ್ ಪ್ರೆಸಿಡೆಂಟ್ ಫೋರಮ್ ಉಲ್ಲಾಸ ತಾಳಬೈಲಕರವರು ತಮ್ಮ ಸನಿವಾಸ ಶ್ರೀ ಸಮರ್ಥದಲ್ಲಿ ಸ್ಮರಣಿಕೆ, ಉಡುಗೊರೆ ನೀಡಿ, ಮುತ್ತಿನ ಮಾಲೆ ಹಾಕಿ, ಮೈಸೂರು ಪೇಟಾ ತೊಡಿಸಿ ಆತ್ಮೀಯವಾಗಿ ಸತ್ಕರಿಸಿ ಇನ್ನೂ ಹೆಚ್ಚಿನ ಸಾಧನೆಗೆ ಶುಭ ಕೋರಿದರು.

ಸುನೀತಾ ತಾಳೆಬೈಲಕರ್, ವಿರೇಶ ಚಿಕ್ಕಮಠ, ನೂತನ ಯೋಜನೆಗಳ ರುವಾರಿ ವಿಜಯಕುಮಾರ, ಸಜ್ಜನ ಮೂರ್ತಿ ಸುರೇಶ ಮಂಜಪ್ಪ, ಹಿರಿಯ ಅನುಭಾವಿ ಆ‌ರ್. ವಿ. ಕವಿಶೆಟ್ಟಿ, ನಡೆದಾಡುವ ಜಂಗಮ ಚನ್ನಬಸಪ್ಪ ಧಾರವಾಡ ಶೆಟ್ಟರ್, ಮಾರುತಿ, ಶಿವನಗೌಡ ಹನುಮಂತಗೌಡ, ಎಸ್.ಎಮ್. ನರಗುಂದ, ರವಿ, ಸೃಷ್ಟಿ ಚವ್ಹಾಣ ಮುಂತಾದವರು ಉಪಸ್ಥಿತರಿದ್ದು, ಜೆಂಟ್ಸ್ ಸಂಸ್ಥೆಯು ಮಾಡಿರುವ ಸಮಾಜಪರ ಸೆವಾ ಕಾರ್ಯಗಳಾದ ಗೋ ಪೂಜೆ, ರೋಗಿಗಳಿಗೆ ಹಣ್ಣು ವಿತರಣೆ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಕಲಿಕೋಪಕರಣಗಳ ವಿತರಣೆ ಮುಂತಾದ ಸಮಾಜಪರ ಸೇವೆಯನ್ನು ಸ್ಮರಿಸಿಕೊಂಡು ಕೊಂಡಾಡಿದರು.

ಸನ್ಮಾನಿತರಾದ ಇರ್ವರು ಸಾಹಿತಿಗಳಿಗೆ ಧೀಮಂತ ಮುಖ್ಯೋಪಾಧ್ಯಾಯರಾದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಹೆಚ್. ಬಿ. ಕೊರವರ, ಹೆಚ್. ಎಮ್. ಕುಂದರಗಿ ಹಾಗೂ ಶಾಲೆಯ ಸಮಸ್ತ ಗುರುಮಾತೆಯರು, ಗುರುಗಳು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here