ದೊಡ್ಡ ಹಿತ್ತಿಲು ಮಠ ಮೊಗ್ರಾಲ್ ಪುತ್ತೂರಿನಲ್ಲಿ ದೈವಗಳ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

0
18

ಪುತ್ತೂರು ಸಮೀಪದ ಮೊಗ್ರಾಲ್‌ನ ದೊಡ್ಡ ಹಿತ್ತಿಲು ಮಠದಲ್ಲಿರುವ ಶ್ರೀ ಚೌಕರು ಗುಳಿಗ ಹಾಗೂ ಶ್ರೀ ಕೊರಗ ತನಿಯ ಸನ್ನಿದಿಯಲ್ಲಿ 23-5- 2026ರಂದು ನಡೆಯಲಿರುವ ವಾರ್ಷಿಕ ದೈವಗಳ ಕೋಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.

ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈವದ ಪಾತ್ರಿ ಶ್ರೀ ರಾಮ ಪಂಜದಗುಡ್ಡೆ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಶ್ರೀ ಕೋಮಾರಾಯ ಪರಿವಾರ ದೈವಗಳ ಸನ್ನಿದಿಯ ಆಡಳಿತ ಸಮಿತಿ ಅಧ್ಯಕ್ಷರಾದ ಬಾಸ್ಕರ ಪಯ್ಯರ್ಮೆ, ಜನಾರ್ದನ ನಡುಹಿತ್ತಿಲು ಸೇರಿದಂತೆ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೋಲೋತ್ಸವವು ಭಕ್ತಿಭಾವ ಹಾಗೂ ವೈಭವದಿಂದ ನಡೆಯಲೆಂದು ಪ್ರಾರ್ಥಿಸಲಾಯಿತು.

LEAVE A REPLY

Please enter your comment!
Please enter your name here