ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅದೆಷ್ಟೋ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಉಗ್ರರ ದಾಳಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಹೇಳಿದ ಮಾತಿನಂತೆ, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಪ್ರೀತಿಪಾತ್ರರನ್ನು ಕಳೆದುಕೊಂಡ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದ್ದು, ಈ ಪ್ರತಿಕಾರಕ್ಕೆ ಇಡೀ ಭಾರತವೇ ಸಂಭ್ರಮಾಚರಣೆ ನಡೆಸಿದೆ. ಕೆಲ ಟ್ರೋಲ್ ಪೇಜ್‌ಗಳಂತೂ ಪಾಕಿಸ್ತಾನಕ್ಕೆ ನಡುರಾತ್ರಿ ಸೂರ್ಯದರ್ಶನ ಮಾಡಿಸಿದ ಭಾರತ, ಪಾಕಿಸ್ತಾನದಲ್ಲಿ ದೀಪಾವಳಿ ಸಂಭ್ರಮಾಚರಣೆ ಅಂತೆಲ್ಲಾ ಮೀಮ್ಸ್ ಶೇರ್ ಮಾಡುತ್ತಿದೆ. ಈ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕನ್ನಡಿಗ ಮಂಜುನಾಥ್ ತಮ್ಮ ಪತ್ನಿ ಪಲ್ಲವಿಯ ಕಣ್ಣೆದುರೇ ಉಗ್ರರ ಗುಂಡಿನೇಟಿಗೆ ಬಲಿಯಾದರು. ಇನ್ನೂ ಉಗ್ರನೊಬ್ಬ ಮೋದಿಗೆ ಹೋಗಿ ಹೇಳು ಎಂದು ಪಲ್ಲವಿಯವರ ಬಳಿ ಹೇಳಿದ್ದನಂತೆ. ಇದೀಗ ಪ್ರಧಾನಿ ಮೋದಿ ʼಹೋಗಿ ಮೋದಿಗೆ ಹೇಳು ಎಂದಿದ್ದವರಿಗೆ ಪ್ರತ್ಯುತ್ತರ ನೀಡಿದ್ದು, ಈ ಕುರಿತ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. uttarkarnakatamandi, mememandir ಇನ್‌ಸ್ಟಾಗ್ರಾಮ್ ಪೇಜ್, BJP4Karnataka ಎಕ್ಸ್ ಖಾತೆ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೇಜ್‌ಗಳಲ್ಲಿ ಇಂತಹ ಮೀಮ್ಸ್‌ಗಳು ವೈರಲ್ ಆಗ್ತಿವೆ.