ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೋಸಿಯೇಷನ್‌ಗೆ ಕೆ. ಸುಧಾಕರ ಆಚಾರ್ಯ ಅಧ್ಯಕ್ಷರಾಗಿ ಆಯ್ಕೆ

0
12

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೋಸಿಯೇಷನ್ (ರಿ.) ಹಾಗೂ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ (ರಿ.), ಕಾರ್ಕಳ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮುಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಕಾಶ್ ಆಚಾರ್, ವಕೀಲರು ಹಾಗೂ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕೆ. ಸುಧಾಕರ ಆಚಾರ್ಯ (ಸಾಲ್ಮರ) ಅಧ್ಯಕ್ಷರಾಗಿ ಹಾಗೂ ಕೆ. ಸುರೇಶ್ ಆಚಾರ್ಯ (ನಿಟ್ಟೆ) ಕಾರ್ಯದರ್ಶಿಯಾಗಿ ಆಯ್ಕೆಯಾದರು.

ನೂತನ ಪದಾಧಿಕಾರಿಗಳು ಅಧ್ಯಕ್ಷರು – ಕೆ. ಸುಧಾಕರ ಆಚಾರ್ಯ (ಸಾಲ್ಮರ),ಕಾರ್ಯದರ್ಶಿ-ಕೆ. ಸುರೇಶ್ ಆಚಾರ್ಯ (ನಿಟ್ಟೆ),ಕೋಶಾಧಿಕಾರಿ- ಪಿ. ವಸಂತ ಆಚಾರ್ಯ, ಗೌರವ ಅಧ್ಯಕ್ಷರು-ಕೆ. ದಿನೇಶ್ ಆಚಾರ್ಯ,ಉಪಾಧ್ಯಕ್ಷರು- ಕೆ. ದಿವಾಕರ ಆಚಾರ್ಯ (ನಿಟ್ಟೆ),ಗೌರವ ಕಾರ್ಯದರ್ಶಿ- ಪಿ. ರವಿ ಆಚಾರ್ಯ (ಪೆರ್ವಾಜೆ)

ಅಸೋಸಿಯೇಷನ್ ವತಿಯಿಂದ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಗೆ ₹15,000 ಸಹಾಯಧನ ನೀಡಲಾಯಿತು.

ಶೈಕ್ಷಣಿಕ ಪ್ರೋತ್ಸಾಹದ ಅಂಗವಾಗಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 13 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ 19 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.

ಸಂಸ್ಥೆಯ ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಕೆ. ರತ್ನಾಕರ ಆಚಾರ್ಯ (ಕಟ್ಟಿಮಾರ್), ಎಂ. ರಮೇಶ್ ಆಚಾರ್ಯ (ಪರಪು), ಪ್ರಶಾಂತ್ ಆಚಾರ್ಯ, ಸತೀಶ್ ಆಚಾರ್ಯ, ಅಶೋಕ್ ಆಚಾರ್ಯ (ಅಂಡಾರ್), ಎಸ್. ಪ್ರವೀಣ್ ಆಚಾರ್ಯ, ವೈ.ಟಿ. ಪ್ರಕಾಶ್ ಆಚಾರ್ಯ ಹಾಗೂ ಕೆ. ಕರುಣಾಕರ ಆಚಾರ್ಯ ಆಯ್ಕೆಯಾದರು.

ವೇದಿಕೆಯಲ್ಲಿ ಪಿ. ರವಿ ಆಚಾರ್ಯ, ಪಿ. ವಸಂತ ಆಚಾರ್ಯ, ಕೆ. ದಿನೇಶ್ ಆಚಾರ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಕೆ. ಸುಧಾಕರ ಆಚಾರ್ಯ ಸ್ವಾಗತಿಸಿದರು. ರಮೇಶ್ ಆಚಾರ್ಯ ಬಂಗ್ಲಗುಡ್ಡೆ ವಂದಿಸಿದರು. ಎಂ. ರಮೇಶ್ ಆಚಾರ್ಯ ಪರಪು ಕಾರ್ಯಕ್ರಮ ನಿರೂಪಿಸಿದರು.